ಬೆಂಗಳೂರು:- GT ದೇವೇಗೌಡರು,ಹೆಚ್ ಡಿಕೆ ಜೊತೆ ಮಾತಾಡಿದ್ರೆ ಎಲ್ಲಾ ವೈಷಮ್ಯ ಸರಿ ಆಗಲಿದೆ ಎಂದು ಸುರೇಶ್ ಬಾಬು ಹೇಳಿದ್ದಾರೆ.
ಹೆಚ್ಚು ನಿದ್ರೆ ಮಾಡೋದು ಪುರುಷರೋ ಅಥವಾ ಮಹಿಳೆಯರೋ!? ಅಧ್ಯಯನ ಹೇಳೋದು ಹೀಗಿದೆ!
ಈ ಸಂಬಂಧ ಮಾತನಾಡಿದ ಅವರು, ಜಿ.ಟಿ ದೇವೇಗೌಡರಿಗೆ ಅಸಮಾಧಾನ ಇರೋದು ಸತ್ಯ. ದೇವೇಗೌಡರು, ಕುಮಾರಸ್ವಾಮಿ ಜೊತೆ ಮಾತನಾಡಿದರೆ ಎಲ್ಲವೂ ಸರಿ ಆಗಲಿದೆ ಎಂದರು.
ಜಿಟಿ ದೇವೇಗೌಡರಿಗೆ ಅಸಮಾಧಾನ ಇರೋದು ನಿಜ. ಅವರಿಗೆ ಸ್ಥಾನಮಾನದ ಬಗ್ಗೆ ಅಸಮಾಧಾನ ಇದೆ ಎಂದರು. ಇವತ್ತು ನಾನು ಸುದ್ದಿಗೋಷ್ಠಿಗೆ ಬರಲು ಹೇಳಿದ್ದೆ, ಅವರು ಬರಲಿಲ್ಲ. ಚನ್ನಪಟ್ಟಣ ಚುನಾವಣೆ ಸಮಯದಲ್ಲಿ ಪ್ರಚಾರಕ್ಕೆ ಬರುವಂತೆ ದೇವೇಗೌಡ ಕರೆ ಮಾಡಿದ್ದು ನಿಜ. ಆದರೆ ಅವರು ಬರಲಿಲ್ಲ ಎಂದು ಸ್ಪಷ್ಟಪಡಿಸಿದರು.