ಕೋಲಾರ:- ಮುಳಬಾಗಿಲು ಸ್ವಚ್ಚತಾ ಆಂದೋಲನದಡಿ ನಡೆಯುವ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಸಂಪೂರ್ಣವಾಗಿ ಸಹಕಾರ ನೀಡಿ ಸ್ವಚ್ಛ ಗ್ರಾಮಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಲು ಮುಂದಾಗಬೇಕೆಂದು
ತಾ.ಪಂ ಸರ್ವೇಶ್ ಹೇಳಿದರು.
ತಾ.ಪಂ ಸಂಭಾಗಣದಲ್ಲಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಒ ಮತ್ತು ಇತರೆ ಅಧಿಕಾರಿಗಳಿಗೆ ಹಮ್ಮಿಕೊಂಡ ಸ್ವಚ್ಚತಾ ಆಂದೋಲನ ಅಭಿಯಾನ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಕಾರ್ಯಕ್ರಮವನ್ನು ಅನುಷ್ಟಾನಕ್ಕೆ ತರಲು ಸ್ಥಳೀಯರ ಸಹಕಾರ ಮತ್ತು ಪ್ರೋತ್ಸಾಹ ತುಂಬಾ ಮುಖ್ಯ ಎಂದರು.
ಗ್ರಾ.ಪಂ ಸರ್ವ ಸದಸ್ಯರ ಮಹಾ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಪೆತ್ತಾಂಡ್ಲಹಳ್ಳಿ ಪಿ.ವಿ.ಶಂಕರ್ ಮಾತನಾಡಿ, ಗ್ರಾ.ಪಂ ಸದಸ್ಯರು ತಮ್ಮ ಹಳ್ಳಿಗಳನ್ನು ಮಾದರಿ ಗ್ರಾಮಗಳನ್ನಾಗಿ ಮಾರ್ಪಾಡು ಮಾಡಲು ಈ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಕೈ ಜೋಡಿಸಬೇಕು. ಆಗ ಇಂತಹ ಯೋಜನೆ ಯಶಸ್ವಿಯಾಗಿ ನಡೆಯಲು ಅನುಕೂಲ ಆಗುತ್ತದೆ ಎಂದು ತಿಳಿಸಿದರು.
ಇಡೀ ತಾಲ್ಲೂಕಿನಾದ್ಯಂತ ಸ್ವಚ್ಚತಾ ಆಂದೋಲನದಡಿ ಪ್ರತಿ ಗ್ರಾಮದಲ್ಲಿ ಸಹ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳಲು ಗ್ರಾ.ಪಂ ಸದಸ್ಯರು ಮುಖ್ಯ ಪಾತ್ರ ವಹಿಸಬೇಕು. ಪ್ರತಿಯೊಂದು ಮನೆ ಮನೆಯಲ್ಲಿನ ಜನರಿಗೂ ಸಹ ಸ್ವಚ್ಚತೆ ಬಗ್ಗೆ ತಿಳುವಳಿಕೆಯನ್ನು ಮೂಡಿಸಬೇಕಾಗಿದೆ ಎಂದು ಹೇಳಿದರು.
ಗ್ರಾ.ಪಂ ಮಹಾ ಒಕ್ಕೂಟದ ಖಜಾಂಚಿ ಕಾಡೇನಹಳ್ಳಿ ಅಶೋಕ್ ಮಾತನಾಡಿ, ಕನಿಷ್ಠ ಎರಡು ತಿಂಗಳಿಗೊಮ್ಮೆ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ಜೊತೆ ಆಡಳಿತ ಮತ್ತು ಸಮನ್ವಯ ಸಭೆಯನ್ನು ನಡೆಸಬೇಕು. ಹಾಗೆಯೇ ಸ್ವಚ್ಛತಾ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಗ್ರಾ.ಪಂ ಸದಸ್ಯರು ತಪ್ಪದೆ ಭಾಗವಹಿಸಿ ತಮ್ಮ ಹಳ್ಳಿಗಳನ್ನು ತಪ್ಪದೇ ಕಡ್ಡಾಯವಾಗಿ ಸ್ವಚ್ಛತೆ ಮಾಡಿಸಬೇಕು ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ತಾಲೂಕಿನ ಅಭಿವೃದ್ಧಿ ವಿಷಯದಲ್ಲಿ ಶಾಸಕ ಅಧ್ಯಕ್ಷತೆಯಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು, ಗ್ರಾ.ಪಂ ಅಧ್ಯಕ್ಷರು, ಅಧಿಕಾರಿಗಳೊಂದಿಗೆ ಸಭೆ ಮಾಡಿ ಪ್ರತಿ ಇಲಾಖೆವಾರು ಸರ್ಕಾರದ ಅನುದಾನ, ಅದರ ಅನುಷ್ಠಾನ, ಅದರ ಕಾರ್ಯ ವ್ಯಾಪ್ತಿ, ಕಾಮಗಾರಿಗಳು ಆರಂಭದಿಂದ ಪಂಚಾಯಿತಿಗೆ ಹಸ್ತಾಂತರ ಮಾಡುವವರಿಗೆ ಗ್ರಾಮ ಪಂಚಾಯಿತಿ ಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.
ನರೇಗಾ ಸಹಾಯಕ ನಿರ್ದೇಶಕ ರವಿಚಂದ್ರ, ಗ್ರಾ.ಪಂ ಸದಸ್ಯರ ಮಹಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ರಾಜೇಂದ್ರ ಪ್ರಸಾದ್, ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಅಶ್ವಥ್ ನಾರಾಯಣ್, ತಾಲೂಕಿನ ಎಲ್ಲಾ ಗ್ರಾ. ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಅಂಗನವಾಡಿ ಇಲಾಖೆ ಅಧಿಕಾರಿಗಳು, ಎನ್ ಆರ್ ಎಲ್ ಎಂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.