ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ ವಿಚಾರ ಸಂಬಂಧ ಇಂದಲ್ಲಾ ನಾಳೆ ಯುವಕರು ಹೊರ ಹೊಮ್ಮಬೇಕು. ಅವರ ಕೈಗಳನ್ನು ಬಲಪಡಿಸಬೇಕು, ಮಾರ್ಗದರ್ಶನ ನೀಡಬೇಕು ಎಂದು ಬೆಂಗಳೂರಿನಲ್ಲಿ ಬಿಜೆಪಿ ಮಾಜಿ ಸಚಿವ ಎಸ್ಎಂ ಕೃಷ್ಣ ತಿಳಿಸಿದರು.
![Demo](https://ainlivenews.com/wp-content/uploads/2023/12/spoorthi-1.jpg)
ಹಿರಿಯರಾದ ನಾವು ಸಮನ್ವಯ ಸಾಧಿಸಿಕೊಂಡು ಹೋಗಬೇಕಾಗುತ್ತದೆ. ಇಂದಲ್ಲಾ ನಾಳೆ ಯುವಕರು ಹೊರ ಹೊಮ್ಮಿ ಸಾಧನೆ ಮಾಡಬೇಕು.
ಈ ಯುವ ಮುಖಂಡನ ಹೆಗಲಿನ ಮೇಲೆ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಅವರು ದೊಡ್ಡ ಜವಾಬ್ದಾರಿಗಳನ್ನು ಹೊರೆಸಿದ್ದಾರೆ. ಬಿ.ವೈ.ವಿಜಯೇಂದ್ರನ ಪ್ರತಿಭೆಯನ್ನ ಅವರಲ್ಲರೂ ಗುರುತಿಸಿದ್ದಾರೆ ಎಂದರು.
![](https://ainlivenews.com/wp-content/uploads/2024/01/Ad-Banner-copy-scaled.jpg)