ವಿಶ್ವಕಪ್ ಗೆದ್ದ ಬಳಿಕ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ವಿಶ್ರಾಂತಿ ಮೊರೆ ಹೋಗಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಲಂಡನ್ ರಜೆಯ ಸಮಯದಲ್ಲಿ ಆಧ್ಯಾತ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರೆಡ್ಡಿಟ್ನಲ್ಲಿ ಹಂಚಿಕೊಂಡಿರುವ ವೈರಲ್ ವೀಡಿಯೊದಲ್ಲಿ, ಇಬ್ಬರೂ ಕೃಷ್ಣ ದಾಸ್ ಕೀರ್ತನೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ನೋಡಬಹುದು.
Hidden treasure: ರಬ್ಬರ್ ತೋಟದಲ್ಲಿ ಚಿನ್ನ-ಬೆಳ್ಳಿ ನಾಣ್ಯಗಳ ನಿಧಿ ಪತ್ತೆ..!
ರೆಡ್ಡಿಟ್ ಬಳಕೆದಾರರು ವೀಡಿಯೊದಲ್ಲಿ ಕಾಮೆಂಟ್ ಮಾಡಿದ್ದು, ಎಲ್ಲಾ ಇತರ ಸೆಲೆಬ್ರಿಟಿಗಳು ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ಮದುವೆಯ ಸಂಭ್ರಮದಲ್ಲಿ ಭಾಗವಹಿಸಿದ್ದರೆ ವಿರುಷ್ಕಾ ದಂಪತಿ ಮಾತ್ರ ತಮ್ಮದೇ ಆದ ಆಯ್ಕೆಗಳನ್ನು ಮಾಡಿದ್ದಾರೆ ಹೊಗಳಿದ್ದಾರೆ.
ವೀಡಿಯೊದಲ್ಲಿ ವಿರಾಟ್ ಮತ್ತು ಅನುಷ್ಕಾ ಭಜನೆಯಲ್ಲಿ ಚಪ್ಪಾಳೆ ತಟ್ಟುವುದನ್ನು ಮತ್ತು ಹುರಿದುಂಬಿಸುವುದನ್ನು ಕಾಣಬಹುದು, ಅಮೇರಿಕನ್ ಗಾಯಕ ಕೃಷ್ಣ ದಾಸ್ ಪ್ರೇಕ್ಷಕರನ್ನು ಕೈ ಜೋಡಿಸಿ ಸ್ವಾಗತಿಸುತ್ತಾರೆ.
ವಿರಾಟ್ ಕೊಹ್ಲಿ ಕಳೆದ ಕೆಲವು ವರ್ಷಗಳಿಂದ ಆಧ್ಯಾತ್ಮಿಕತೆಯತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಬ್ಯಾಟಿಂಗ್ನಲ್ಲಿ ಸತತ ವೈಫಲ್ಯ ಅನುಭವಿಸಿದಾಗಲೂ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ಕಾಲ ಕಳೆದಿದ್ದರು. ಭಾರತದಲ್ಲಿದ್ದಾಗ ಸಮಯ ಸಿಕ್ಕಾಗಲೆಲ್ಲ ಕೊಹ್ಲಿ ದಂಪತಿ ಮತ್ತು ಮಕ್ಕಳ ಜೊತೆ ಹಲವು ದೇವಸ್ಥಾನಗಳಿಗೆ ಭೇಟಿ ಕೊಡುತ್ತಾರೆ.
ಕ್ರಿಕೆಟ್ನಿಂದ ನಿವೃತ್ತಿಯಾದ ಬಳಿಕ ವಿರಾಟ್ ಕೊಹ್ಲಿ ಭಾರತವನ್ನು ತೊರೆದು ಲಂಡನ್ನಲ್ಲೇ ನೆಲೆಸುತ್ತಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಲಂಡನ್ನಲ್ಲಿ ಒಬ್ಬನೇ ಸಾಮಾನ್ಯ ಮನುಷ್ಯನಂತೆ ಓಡಾಡಬಹುದು, ಅದು ನನಗೆ ತುಂಬಾ ಇಷ್ಟ ಎಂದು ವಿರಾಟ್ ಕೊಹ್ಲಿ ಈ ಮೊದಲು ಸಂದರ್ಶನವೊಂದರಲ್ಲಿ ಹೇಳಿದ್ದರು. ಭಾರತದಲ್ಲಿ ಅವರು ಹಾಗೆ ಮಾಡಲು ಆಗುವುದಿಲ್ಲ, ಎಲ್ಲೇ ಹೋದರು ಅವರ ಹಿಂದೆ ಅಭಿಮಾನಿಗಳ ದಂಡೇ ಇರುತ್ತದೆ.
ತಮ್ಮ ಎರಡನೇ ಮಗುವಿಗಾಗಿ ಕೂಡ ಕೊಹ್ಲಿ-ಅನುಷ್ಕಾ ಲಂಡನ್ಗೆ ಹಾರಿದ್ದರು. ಸಮಯ ಸಿಕ್ಕಾಗಲೆಲ್ಲಾ ಕೊಹ್ಲಿ ಮತ್ತು ಕುಟುಂಬ ಲಂಡನ್ಗೆ ತೆರಳುತ್ತಿದೆ. ಇದನ್ನೆಲ್ಲಾ ಗಮನಿಸಿರುವ ಅಭಿಮಾನಿಗಳು ಕೊಹ್ಲಿ ಲಂಡನ್ನಲ್ಲಿ ನೆಲೆಸುವ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.