ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗು ಡಿಸಿಎಂ ಡಿ.ಕೆ.ಶಿವಕುಮಾರ್ ಸಂಕ್ರಾಂತಿ ಹಬ್ಬದ ವೇಳೆ ನಿಗಮ ಮಂಡಳಿ ನೇಮಕ ಆಗಲಿದೆ ಎಂದಿದ್ದರು.ಆದ್ರೆ, ಇಂದಿನ ವಾತಾವರಣವೇ ಬದಲಾಗಿದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನ ಕೇಳಿದ್ರೆ ನೀವು ಸಿಎಂ,ಡಿಸಿಎಂ ಕೇಳಿ ಅಂತಾರೆ.ಖರ್ಗೆಯವರ ಮಾತು ನೋಡಿದ್ರೆ ಯಾಕೋ ಸದ್ಯಕ್ಕೆ ಆಗುವಂತೆ ಕಾಣ್ತಿಲ್ಲ.
ಎಐಸಿಸಿ ಅಧ್ಯಕ್ಷರಿಗೆ ಮಾಹಿತಿ ಇಲ್ಲ ಅಂದ್ರೆ ನೇಮಕದ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ ಅನ್ನೋದು ಅಷ್ಟೇ ಸ್ಪಷ್ಟ.ಯಾಕಂದ್ರೆ ಗೊಂದಲಗಳು ಇನ್ನೂ ಮುಂದುವರಿದಿವೆ.ಪಟ್ಟಿ ಬಿಡುಗಡೆ ಮಾಡಿದ್ರೆ ಸಿಗದವರು ಚುನಾವಣೆಯಲ್ಲಿ ಕೈಕೊಡಬಹುದು ಅನ್ನೋ ಅನುಮಾನವೂ ಇದೆಯಂತೆ.ಕೊಟ್ಟವರು ಕೆಲಸ ಮಾಡಿದ್ರೆ ಉಳಿದವ್ರು ನಾವ್ಯಾಕೆ ಲಾಭವಿಲ್ಲದೆ ಮಾಡ್ಬೇಕು ಅಂತಾರೆ.
Bihula Bai: ಕಸ ಸಂಗ್ರಹಿಸಿ 20ರೂ. ದೇಣಿಗೆ ನೀಡಿದ ಅಜ್ಜಿಗೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ!
ಹಾಗಾಗಿ ಚುನಾವಣೆಯವರೆಗೆ ಸುಮ್ಮನಿದ್ರೆ ಆಗ ಎಲ್ಲರು ಕೆಲಸ ಮಾಡ್ತಾರೆ. ಹೆಚ್ಚಿನ ಸೀಟು ಗಳನ್ನ ಗೆಲ್ಲಬಹುದು.ಒಂದ್ವೇಳೆ ಪಟ್ಟಿ ಬಿಟ್ರೆ ಚುನಾವಣೆ ಮೇಲೆ ಪರಿಣಾಮ ಬೀರಬಹುದೆಂಬ ಅನುಮಾನಗಳೂ ಇವೆಯಂತೆ..ಹಾಗಾಗಿಯೇ ಈಗ ಆಗ ಅಂತ ಕಾಲ ತಳ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಎನ್ನಲಾಗಿದೆ.
ಇನ್ನು ಕಾಂಗ್ರೆಸ್ ನಾಯಕರ ತೀರ್ಮಾನಕ್ಕೆ ನಿಗಮ ಮಂಡಳಿ ಆಕಾಂಕ್ಷಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ. ಸಂಕ್ರಾಂತಿ ವೇಳೆಗೆ ನಿಗಮ ಮಂಡಳಿ ಅಧ್ಯಕ್ಷನಾಗುತ್ತೇನೆ ಎಂದು ಆಸೆ ಇಟ್ಟಿಕೊಂಡಿದ್ದ ಶಾಸಕರು ಮುನಿಸುಕೊಂಡಿದ್ದಾರೆ. ಈ ವಾರದೊಳಗೆ ನಿಗಮ ಮಂಡಳಿ ನೇಮಕ ಆಗದ್ದಿದ್ರೆ,ನಾವು ಮಾತಾಡುತ್ತೇವೆ ಎಂದು ಕೆಲವರು ಮಾತನಾಡಿಕೊಂಡಿದ್ದಾರೆ.