ಬೆಂಗಳೂರು: ಎರಡು ಬಾರಿ ಪ್ರಧಾನಿಯಾಗಿ ಹಾಗೂ ಸಂಸತ್ತಿನ ಮೇಲ್ಮನೆಯಲ್ಲಿ 33 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ವಿಧಿವಶರಾಗಿದ್ದಾರೆ. ಇನ್ನೂ ಈ ಬಗ್ಗೆ ಸಿಂಗ್ 10 ವರ್ಷ ಸಿಂಗ್ ಪ್ರಧಾನಿಯಾಗಿದ್ದರೂ ಸಹ ಅಹಂ ಅವರ ಬಳಿ ಸುಳಿಯಲಿಲ್ಲ ಎಂದು ಮಾಜಿ ಸಿಎಂ ಡಿ.ವಿ ಸದಾನಂದಗೌಡ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಿಂಗ್ 10 ವರ್ಷ ಸಿಂಗ್ ಪ್ರಧಾನಿಯಾಗಿದ್ದರೂ ಸಹ ಅಹಂ ಅವರ ಬಳಿ ಸುಳಿಯಲಿಲ್ಲ. ಈಗ ಯಾವುದೇ ಪಾರ್ಟಿಯಾಗಲಿ ಒಬ್ಬ ಗ್ರಾಮ ಪಂಚಾಯತಿ ಸದಸ್ಯ ಆದ್ರೂ ಸಾಕು ಅವರ ಅಹಂ ನೋಡೋಕೆ ಆಗಲ್ಲ. ಅದೆಲ್ಲವನ್ನೂ ಮೀರಿ ನಿಂತವರು ಸಿಂಗ್. ಅವರು ಎಂದು ರಾಜಕಾರಣ ಮಾಡಿಲ್ಲ, ಎಲ್ಲರ ಜೊತೆ ಬಹಳ ಸೌಜನ್ಯದಿಂದ ನಡೆದುಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.
ಹೋಟೆಲ್ ಗೆ ಕರೆಸಿ ಪ್ರಿಯಕರನ ಮರ್ಮಾಂಗ ಕತ್ತರಿಸಿದ ಪ್ರಿಯತಮೆ..! ಮುಂದೇನಾಯ್ತು..?
ಮನಮೋಹನ್ ಸಿಂಗ್ ಅವರು ಪ್ರಧಾನಿ ಸ್ಥಾನದ ಘನತೆ ಉಳಿಸಿಕೊಂಡಿದ್ದರು. ಅವರ ವಿರುದ್ಧ ತಿರುಗಿ ಬಿದ್ದರೂ ವಿಚಲಿತರಾಗದೆ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದರು. ಅವರು ದೇಶದ ಉತ್ಕೃಷ್ಟ ರಾಜಕಾರಣಿ. ಅವರ ಅಗಲುವಿಕೆ ದೇಶಕ್ಕೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ.