ಹಿಂದೆ ಬೆಟ್ಟ ಗುಡ್ಡಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನೆಲ್ಲಿಕಾಯಿ ಮರಗಳು ಇದು ಹೈಬ್ರಿಡ್ ಆಗಿ ಬೆಳೆಯಲಾಗುತ್ತಿದೆ. ನೆಲ್ಲಿಕಾಯಿಯಲ್ಲಿ ಇರುವಂತಹ ಅಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಅದರಲ್ಲೂ ಬೆಟ್ಟದ ನೆಲ್ಲಿಕಾಯಿಯನ್ನು ಸೇವನೆ ಮಾಡಿದರೆ, ಅದು ಇನ್ನಷ್ಟು ಲಾಭಕಾರಿ. ನೆಲ್ಲಿಕಾಯಿಯನ್ನು ಆಯುರ್ವೇದದಲ್ಲಿ ಹಿಂದಿನಿಂದಲೂ ಔಷಧಿಯಾಗಿ ಬಳಕೆ ಮಾಡಿಕೊಂಡು ಬರಲಾಗುತ್ತಿದೆ.
- ನೆಲ್ಲಿಕಾಯಿ ಸೇವನೆ ಮಾಡಿದರೆ ಅದರಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿ ಆಗುವುದು ಮತ್ತು ಕಾಯಿಲೆಗಳ ವಿರುದ್ಧ ರಕ್ಷಣೆ ಸಿಗುವುದು. ಕೆಮ್ಮು, ಶೀತ ಮತ್ತು ಶ್ವಾಸಕೋಸದ ಸಮಸ್ಯೆಗಳನ್ನು ಇದು ದೂರವಿಡುವುದು. ಕೂದಲು ಉದುರುವಿಕೆ, ಬಿಳಿಯಾಗುವ ಸಮಸ್ಯೆಗೂ ಇದು ಪರಿಣಾಮಕಾರಿ.
- ಇದರಲ್ಲಿ ಇರುವಂತಹ ಪ್ರಬಲ ಆಂಟಿಆಕ್ಸಿಡೆಂಟ್ ಅಮಶವು ಕೂದಲು ಮತ್ತು ಚರ್ಮವನ್ನು ರಕ್ಷಿಸುವುದು. ಹೊಸ ಅಂಗಾಂಶಗಳು ಬೆಳೆಯಲು ಇದು ಸಹಕಾರಿ ಕೂಡ. ಕೂದಲು ಗಂಟು ಕಟ್ಟುವುದು, ಬಿಸಿಲಿನ ಸುಟ್ಟು ಕಲೆಗಳೂ ಮತ್ತು ಬಿಸಿಲಿನಿಂದ ಆಗಿರುವ ಹಾನಿಯನ್ನು ಇದು ತಡೆಯುವುದು.
- ನೆಲ್ಲಿಕಾಯಿ ಎಣ್ಣೆಯನ್ನು ಕೂದಲಿಗೆ ಹಚ್ಚಿಕೊಂಡರೆ ಅದು ಕೂದಲಿನ ರಕ್ಷಣೆ ಮಾಡುವುದು ಮತ್ತು ಕೂದಲಿನ ಬೆಳವಣಿಗೆಗೆ ಇದು ಸಹಕಾರಿ.
- ತಲೆಬುರುಡೆಯಲ್ಲಿ ಇರುವಂತಹ ತಲೆಹೊಟ್ಟನ್ನು ಇದು ನಿವಾರಣೆ ಮಾಡುವುದು. ಅದೇ ರೀತಿಯಾಗಿ ಇದು ತಲೆಬುರುಡೆಯ ಆರೋಗ್ಯವನ್ನು ಕಾಪಾಡುವುದು. ನೆಲ್ಲಿಕಾಯಿಯ ಮನೆಮದ್ದುಗಳು
- ಕೂದಲು ಬಿಳಿಯಾಗುವ ಸಮಸ್ಯೆಯನ್ನು ನೆಲ್ಲಿಕಾಯಿ ಜ್ಯೂಸ್ ನಿವಾರಣೆ ಮಾಡುವುದು. ಇದನ್ನು ಪ್ರತಿನಿತ್ಯವೂ ಸೇವನೆ ಮಾಡಿದರೆ, ತುಂಬಾ ಲಾಭಕಾರಿ. ಇಷ್ಟು ಮಾತ್ರವಲ್ಲದೆ, ನೆಲ್ಲಿಕಾಯಿ ಜ್ಯೂಸ್ ನ್ನು ತಲೆಬುರುಡೆಗೆ ಹಚ್ಚಿಕೊಂಡರೆ ಆಗ ಇದು ಕೂದಲನ್ನು ರಕ್ಷಿಸುವುದು.
- ನೆಲ್ಲಿಕಾಯಿ ರಸವನ್ನು ನೀರಿಗೆ ಬೆರೆಸಿಕೊಂಡು ಅದನ್ನು ತಲೆಬುರುಡೆಗೆ ಹಚ್ಚಿ ಸರಿಯಾಗಿ ಮಸಾಜ್ ಮಾಡಿ. ಇದನ್ನು 15 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಕೂದಲಿನ ಆರೋಗ್ಯವನ್ನು ಇದು ರಕ್ಷಣೆ ಮಾಡುವುದು ಮತ್ತು ತಲೆಹೊಟ್ಟನ್ನು ನಿಯಂತ್ರಿಸುವುದು.
- ನೆಲ್ಲಿಕಾಯಿಯನ್ನು ಸರಿಯಾಗಿ ರುಬ್ಬಿಕೊಂಡು ಅದನ್ನು ಮದರಂಗಿ ಹುಡಿಗೆ ಹಾಖಿ. ಇದಕ್ಕೆ 4 ಚಮಚ ಲಿಂಬೆ ರಸ, ಕಾಫಿ ಹುಡಿ, 2 ಮೊಟ್ಟೆ ಮತ್ತು 2 ಚಮಚ ಎಣ್ಣೆ ಹಾಕಿ ಮತ್ತು ತೆಗೆದಿಟ್ಟಿರುವ ನೆಲ್ಲಿಕಾಯಿ ನೀರು ಕೂಡ ಹಾಕಿ ಪೇಸ್ಟ್ ಮಾಡಿ.
- ಎರಡು ಮೂರು ಗಂಟೆಗಳ ಕಾಲ ಇದನ್ನು ಹಾಗೆ ಬಿಡಿ. ಇದರ ಬಳಿಕ ಕೂದಲಿಗೆ ಹಚ್ಚಿಕೊಳ್ಳಿ ಮತ್ತು ಕೂದಲನ್ನು ಮುಚ್ಚಿಕೊಳ್ಳಿ. ಕನಿಷ್ಠ ಎರಡು ಗಂಟೆಗಳ ಕಾಲ ಹಾಗೆ ಬಿಡಿ. ಇದರ ಬಳಿಕ ನೀರಿನಿಂದ ತೊಳೆಯಿರಿ.
- ಇಂದಿನ ಹೆಚ್ಚಿನ ಶಾಂಪೂಗಳಿಗೆ ನೆಲ್ಲಿಕಾಯಿ ಬಳಕೆ ಮಾಡುವುದನ್ನು ಪ್ರಚಾರ ಮಾಡುವುದನ್ನು ನೀವು ನೋಡಿರಬಹುದು. ನೆಲ್ಲಿಕಾಯಿ ಶಾಂಪೂ ಬಳಕೆ ಮಾಡಿದರೆ, ಅದು ಕೂದಲನ್ನು ಕಾಂತಿಯುತವಾಗಿಸುವುದು.
- ಮನೆಯಲ್ಲೇ ಇದನ್ನು ತಯಾರಿಸಲು ಒಂದು ಒಂದು ಹಿಡಿ ರೀತಾ, ನೆಲ್ಲಿಕಾಯಿ ಮತ್ತು ಶಿಕಾಕಾಯಿ ತೆಗೆದುಕೊಂಡು ಅದನ್ನು ಒಂದು ಲೀಟರ್ ನೀರಿಗೆ ಹಾಕಿ ಮತ್ತು ರಾತ್ರಿಯಿಡಿ ಹಾಗೆ ನೆನೆಯಲು ಬಿಡಿ.
- ಮರುದಿನ ಬೆಳಗ್ಗೆ ಇದನ್ನು ಹದ ಬೆಂಕಿಯಲ್ಲಿ ಕುದಿಸಿ ಮತ್ತು ನೀರಿನ ಪ್ರಮಾಣವು ಅರ್ಧದಷ್ಟು ಆಗುವ ತನಕ ಕುದಿಸಿ. ದೊಡ್ಡ ಬೆಂಕಿಯಲ್ಲಿ ಕುದಿಸಬೇಡಿ. ತುಂಬಾ ಕಡಿಮೆ ಬೆಂಕಿಯಲ್ಲಿ ಕುದಿಸಿ. ಇದರ ಬಳಿಕ ಮಿಶ್ರಣವು ತಂಪಾಗಲು ಬಿಡಿ ಮತ್ತು ಇದನ್ನು ಸೋಸಿಕೊಂಡು ಅದರಿಂದ ಕೂದಲು ತೊಳೆಯಿರಿ. ಇದನ್ನು 3-4 ದಿನಗಳ ಕಾಲ ಫ್ರಿಡ್ಜ್ ನಲ್ಲಿ ಇಡಬಹುದು