ಬೆಂಗಳೂರು: ವಾಸ್ತು ಪ್ರಕಾರ ನೀವು ಮನೆ ಕಟ್ಟಿದರೆ, ವಾಸ್ತು ಪ್ರಕಾರ ನಡೆದುಕೊಂಡರೆ ನಿಮ್ಮ ಜೀವನದಲ್ಲಿ ಯಶಸ್ಸು ಎನ್ನುವುದು ಕಟ್ಟಿಟ್ಟ ಬುತ್ತಿ. ಮನೆ ಕಟ್ಟಲು ಮಾತ್ರವಲ್ಲದೆ, ನೀವು ಧರಿಸುವ ಬಟ್ಟೆಗಳು, ಪೂಜಾ ಕೋಣೆ, ನಿಮ್ಮ ಪರ್ಸ್ಗೆ ಸಂಬಂಧಿಸಿದಂತೆ ಕೂಡಾ ವಾಸ್ತು ನಿಯಮವಿದೆ. ಅಷ್ಟೇ ಅಲ್ಲ ನೀವು ಧರಿಸುವ ಪಾದರಕ್ಷೆ ವಿಚಾರದಲ್ಲಿ ಕೂಡಾ ನೀವು ವಾಸ್ತುವನ್ನು ಪಾಲಿಸಿದರೆ ಸಂತೋಷ ಎನ್ನುವುದು ಸದಾ ಕಾಲ ನಿಮ್ಮ ಪಾಲಿಗೆ ಇರಲಿದೆ.
ಚಪ್ಪಲಿಗಳನ್ನು ಅಥವಾ ಬೂಟುಗಳನ್ನು ನಾವೇಕೆ ತಲೆಕೆಳಗಾಗಿ ಇಡಬಾರದು ಎಂಬುದು ನಿಮಗೆ ತಿಳಿದಿದೆಯೇ..? ಅಷ್ಟಕ್ಕೂ ಅದರ ಹಿಂದಿನ ಕಾರಣವೇನು..? ನಾವು ಧರಿಸುವ ಚಪ್ಪಲಿ ಅಥವಾ ಬೂಟುಗಳನ್ನು ತಲೆಕೆಳಗಾಗಿ ಇಡುವುದರಿಂದ ಜೀವನದಲ್ಲಿ ಹಲವಾರು ಸಮಸ್ಯೆಗಳು ಎದುರಿಸಬೇಕಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಚಪ್ಪಲಿ ಅಥವಾ ಬೂಟುಗಳನ್ನು ನಾವೇಕೆ ತಲೆಕೆಳಗಾಗಿ ಇಡಬಾರದು ಗೊತ್ತೇ..?
ಮನೆಯಲ್ಲಿ ಅಪಶ್ರುತಿ:
ಶೂ ಮತ್ತು ಚಪ್ಪಲಿಯನ್ನು ತಲೆಕೆಳಗಾಗಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಕಲಹ ಉಂಟಾಗುವುದರ ಜೊತೆಗೆ ವಿನಾಕಾರಣ ಕುಟುಂಬದ ಸದಸ್ಯರ ನಡುವೆ ಜಗಳಗಳು ಸೃಷ್ಟಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಈ ಕಾರಣದಿಂದಾಗಿ ಮನೆಯ ಮುಂದೆ ಅಥವಾ ಮನೆಯಲ್ಲಿ ಚಪ್ಪಲಿ ಮತ್ತು ಬೂಟುಗಳನ್ನು ತಲೆಕೆಳಗಾಗಿ ಇಡಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
ಹಣದ ನಷ್ಟ:
ತಲೆಕೆಳಗಾದ ಪಾದರಕ್ಷೆ ಅಥವಾ ಚಪ್ಪಲಿಯನ್ನು ನೀವು ನೋಡಿದರೆ, ತಕ್ಷಣ ಅದನ್ನು ನೇರಗೊಳಿಸಿ, ಇಲ್ಲದಿದ್ದರೆ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕೋಪಿಸಿಕೊಳ್ಳಬಹುದು. ಇದರಿಂದ ನೀವು ಹಣದ ನಷ್ಟವನ್ನು ಎದುರಿಸಬೇಕಾಗಬಹುದು. ಹಾಗಾಗಿ ನಮ್ಮ ಮನೆಯ ಹಿರಿಯರು ನೀವು ಈ ತಪ್ಪುಗಳನ್ನು ಮಾಡದಂತೆ ತಡೆಯುತ್ತಾರೆ.
ರೋಗವನ್ನು ಪಡೆಯುವ ಅಪಾಯ:
ಮನೆಯಲ್ಲಿ ಅಪ್ಪಿತಪ್ಪಿಯೂ ಶೂ ಮತ್ತು ಚಪ್ಪಲಿಯನ್ನು ತಲೆಕೆಳಗಾಗಿ ಇಡಬಾರದು. ಚಪ್ಪಲಿ ಅಥವಾ ಬೂಟುಗಳನ್ನು ತಲೆಕೆಳಗಾಗಿ ಇಡುವುದರಿಂದ ಮನೆಯಲ್ಲಿ ಅನಾರೋಗ್ಯ ಉಂಟಾಗುತ್ತದೆ ಎನ್ನುವ ನಂಬಿಕೆಯಿದೆ. ಅಲ್ಲದೇ ಮನೆಯ ಸದಸ್ಯರ ಆಲೋಚನೆಯ ಮೇಲೂ ಅದು ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇದಲ್ಲದೇ ಮನೆಯಲ್ಲಿ ಉದ್ವಿಗ್ನ ವಾತಾವರಣವೂ ಸೃಷ್ಟಿಯಾಗುತ್ತದೆ. ಆದ್ದರಿಂದಲೇ ಅಕಸ್ಮಾತ್ ಚಪ್ಪಲಿ ಉಲ್ಟಾ ಅಥವಾ ತಲೆಕೆಳಗಾಗಿ ಬಿದ್ದರೆ ತಕ್ಷಣ ಅದನ್ನು ನೇರಗೊಳಿಸಿ.
ಶನಿದೇವನು ಕೋಪಿಸಿಕೊಳ್ಳುವನು:
ಶನಿದೇವನು ಮನೆಯಲ್ಲಿ ಚಪ್ಪಲಿ ಅಥವಾ ಬೂಟುಗಳನ್ನು ತಲೆಕೆಳಗಾಗಿ ಅಥವಾ ಉಲ್ಟಾ ಇಟ್ಟುಕೊಂಡರೆ ಕೋಪಗೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. ಏಕೆಂದರೆ ಶನಿದೇವನನ್ನು ಪಾದದ ಅಂಶವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಚಪ್ಪಲಿಯನ್ನು ನೇರವಾಗಿ ಇಡುವುದು ಉತ್ತಮ.
ನಕಾರಾತ್ಮಕ ಶಕ್ತಿಯ ಪ್ರವೇಶ:
ಶಾಸ್ತ್ರದ ಪ್ರಕಾರ, ಚಪ್ಪಲಿ ಮತ್ತು ಬೂಟುಗಳನ್ನು ತಲೆಕೆಳಗಾಗಿ ಅಥವಾ ಉಲ್ಟಾ ಇಡುವುದರಿಂದ ಮನೆಗೆ ನಕಾರಾತ್ಮಕ ಶಕ್ತಿ ಬರುತ್ತದೆ ಮತ್ತು ಮನೆಯಿಂದ ಧನಾತ್ಮಕತೆ ದೂರ ಹೋಗುತ್ತದೆ. ಇದಲ್ಲದೇ ಸಂಸಾರದ ಸುಖ-ಶಾಂತಿಗೆ ಸಾಕಷ್ಟು ಅಡ್ಡಿಯುಂಟಾಗುತ್ತದೆ ಎನ್ನುವ ನಂಬಿಕೆಯಿದೆ.
ಮನೆಯ ಮುಂದೆ ಕೆಟ್ಟದ್ದಾಗಿ ಕಾಣುವುದು:
ಸರಿಯಾದ ಸ್ಥಳದಲ್ಲಿ ಸರಿಯಾದ ರೀತಿಯಲ್ಲಿ ಇರಿಸಿದರೆ ವಸ್ತುಗಳು ನೋಡಲು ಚೆನ್ನಾಗಿರುತ್ತದೆ. ಮನೆಯ ಬಾಗಿಲಲ್ಲಿ ಅಥವಾ ಮನೆಯಲ್ಲಿ ಚಪ್ಪಲಿಯನ್ನು ತಲೆಕೆಳಗಾಗಿ ಅಥವಾ ಉಲ್ಟಾ ಇಟ್ಟರೆ ಅದು ಆ ಮನೆಗೆ ಚೆನ್ನಾಗಿ ಕಾಣುವುದಿಲ್ಲ ಮತ್ತು ಅದನ್ನು ನೋಡಿ ನಿಮ್ಮ ಮನಸ್ಸು ಕೂಡ ಕೆಡುತ್ತದೆ. ಅದಕ್ಕಾಗಿಯೇ ಚಪ್ಪಲಿ ಮತ್ತು ಬೂಟುಗಳನ್ನು ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇಡುವುದು ಉತ್ತಮ.