ಬೆಂಗಳೂರು: ಗಂಡು ಮಗುವು ತಂದೆಯ ಪಾಲನೆಯಲ್ಲಿದ್ದರೂ ಸಹ ತಾಯಿಯ ಆರೈಕೆಯೂ ಬಹಳ ಮುಖ್ಯ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹೌದು ಮಗುವಿಗೆ ವಾರದಲ್ಲಿ ಒಂದು ದಿನ ಮಾತ್ರ ತಾಯಿಯ ಭೇಟಿಗೆ ಅವಕಾಶ ನೀಡಿದರೆ ಸಾಲದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಗಂಡು ಮಗು ತಂದೆಯ ಪಾಲನೆಯಲ್ಲಿದ್ದರೂ ಸಹ ತಾಯಿಯ ಆರೈಕೆ ಮುಖ್ಯವಾಗಿರಲಿದೆ ಎಂದು ತಿಳಿಸಿದೆ.
ಮಗುವಿನ ಸುಪರ್ದಿಯನ್ನು ತಾಯಿಗೆ ಹಸ್ತಾಂತರಿಸುವಂತೆ ಮದ್ದೂರು ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ರದ್ದುಗೊಳಿಸುವಂತೆ ಕೋರಿ ತಂದೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಹಾಗೂ ನ್ಯಾಯಮೂರ್ತಿ ಶಿವಶಂಕರೇಗೌಡ ಅವರಿದ್ದ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಕನಿಷ್ಠ ಎರಡು ದಿನವಾದರೂ ನೀಡಬೇಕು ಎಂದು ಖುದ್ದು ಆಸಕ್ತಿ ವಹಿಸಿ, ತಾಯಿ – ಮಗುವಿನ ಭೇಟಿಗೆ ಎರಡು ದಿನಗಳ ಅವಕಾಶ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.
Bank holidays 2024 May: ಮೇ ತಿಂಗಳಲ್ಲಿ 11 ದಿನ ಬ್ಯಾಂಕ್ ಕ್ಲೋಸ್.! RBI ರಜಾಪಟ್ಟಿ ಹೀಗಿದೆ ನೋಡಿ
ಗಂಡು ಮಗುವು ತಂದೆಯ ಪಾಲನೆಯಲ್ಲಿದ್ದರೂ ಸಹ ತಾಯಿಯ ಆರೈಕೆಯೂ ಬಹಳ ಮುಖ್ಯ. ತಾಯಿಯ ಭೇಟಿಗೆ ಕೇವಲ ವಾರದಲ್ಲಿ ಒಂದು ದಿನ ಅವಕಾಶ ನೀಡಿದರೆ ಸಾಲದು, ಕನಿಷ್ಠ ಎರಡು ದಿನವಾದರೂ ನೀಡಬೇಕು ಎಂದು ತಿಳಿಸಿ ತಾಯಿ – ಮಗುವಿನ ಭೇಟಿಗೆ ಎರಡು ದಿನಗಳ ಅವಕಾಶ ನೀಡಿದೆ. ಅಲ್ಲದೆ, ಮಗುವಿನ ಸುಪರ್ದಿಯನ್ನು ತಾಯಿಗೆ ಹಸ್ತಾಂತರಿಸುವಂತೆ ವಿಚಾರಣಾ ನ್ಯಾಯಾಲಯದ ನೀಡಿದ ತೀರ್ಪಿಗೆ ತಡೆಯಾಜ್ಞೆ ವಿಧಿಸಿ, ಪ್ರತಿವಾದಿಗೆ ಈ ಸಂಬಂಧ ನೋಟಿಸ್ ಜಾರಿಗೊಳಿಸಿದ್ದು, ವಿಚಾರಣೆ ಮುಂದೂಡಿದೆ.