ಬಳ್ಳಾರಿ:- ಪ್ರಾಣ ಬೇಕಾದ್ರೂ ಬಿಟ್ಟೆನು ಆದ್ರೆ ನಾನು ತಪ್ಪು ಮಾಡಲ್ಲ ಎಂದು ಜನಾರ್ಧನ್ ರೆಡ್ಡಿ ಗುಡುಗಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನನ್ನನ್ನು ವಿನಾಕಾರಣ ಕಾಂಗ್ರೆಸ್ ನಾಯಕರು 4 ವರ್ಷ ಜೈಲಿಗೆ ಕಳುಹಿಸಿದರು. ಆದರೆ ನನಗೆ ಸಿಎಂ ಸಿದ್ದರಾಮಯ್ಯ ಬಗ್ಗೆ ಯಾವುದೇ ಸಿಟ್ಟು ಇಲ್ಲ. ಕೆಲ ಕಾಂಗ್ರೆಸ್ ನಾಯಕರು ಸೋನಿಯಾಗಾಂಧಿಗೆ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದರು. ಈಗ ನಾನು 14 ವರ್ಷ ವನವಾಸ ಅನುಭವಿಸಿ ಬಂದಿದ್ದೇನೆ. ಆದರೆ ನಾನು ಮಾಡಿದ ಕರ್ಮವನ್ನು ನಾಣು ಅನುಭವಿಸಿದ್ದೇನೆ ಬಿಡಿ. ಇನ್ನು ಮುಂದಿನ ದಿನಗಳಲ್ಲಿ ಅವರು ಮಾಡಿದ ಕರ್ಮವನ್ನು ಅವರು ಅನುಭವಿಸುತ್ತಾರೆ ಎಂದು ಅವರು ಗುಡುಗಿದ್ದಾರೆ.
ಇಟಲಿ ಸೋನಿಯಾ ಗಾಂಧಿ ಬಳ್ಳಾರಿಗೆ ನನ್ನನ್ನು ಹುಡುಕಿಕೊಂಡು ಬಂದಿದ್ದರು. ನಂತರ ಸೋನಿಯಾಗಾಂಧಿ ಗೆದ್ದ ಬಳಿಕ ರಾಜೀನಾಮೆ ಕೊಟ್ಟು ಹೋದರು. ಚುನಾವಣೆಯಲ್ಲಿ ಸೋತರೂ ಕೂಡ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬರುತ್ತಿದ್ದರು. ಇನ್ನು ಸೋತ ಸಂಡೂರು ಕ್ಷೇತ್ರದಲ್ಲಿ ನಾವು ಕಾಂಗ್ರೆಸ್ಗೆ ಠೇವಣಿ ಇಲ್ಲದಂತೆ ಮಾಡಬೇಕು ಎಂದು ಕಾಂಗ್ರೆಸ್ ವಿರುದ್ಧ ರೆಡ್ಡಿ ಕಿಡಿಕಾರಿದರು.
ಕಾಂಗ್ರೆಸ್ನಲ್ಲಿ ಅಭಿವೃದ್ಧಿ ಅನ್ನೋದು ಮರೀಚಿಕೆಯಾಗಿದೆ. ಗ್ಯಾರೆಂಟಿಗಳಿಂದ ಜನರನ್ನ ಸೋಮಾರಿಗಳನ್ನಾಗಿ ಮಾಡಿದ್ದಾರೆ. ವಾಲ್ಮೀಕಿ ನಿಗಮದ ಹಣದಿಂದ ಈ ತುಕಾರಾಂ ಸಂಸದರಾಗಿದ್ದಾರೆ. ಇನ್ನು ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಜೈಲಿಗೆ ಹೋಗಿ ಬಂದಿದ್ದಾರೆ. ಈ ಪ್ರಕರಣದಲ್ಲಿ ತುಕಾರಾಂ ಜೈಲಿಗೆ ಹೋಗ್ತಾರೆ ಮತ್ತು ಸಂಸದ ಸ್ಥಾನ ಕಳೆದುಕೊಳ್ಳುವುದು ಖಚಿತವಾಗಿದೆ. ನಿಮ್ಮ ಜನಾರ್ಧನರೆಡ್ಡಿ ಕೊಟ್ಟ ಮಾತು ಯಾವತ್ತೂ ಮರೆಯಲ್ಲ ನನ್ನ ಪ್ರಾಣ ಬಿಡ್ತೇನೆ ಹೊರತು ಮಾತು ತಪ್ಪಲ್ಲ ಎಂದು ರೆಡ್ಡಿ ಭಾಷಣದಲ್ಲಿ ಹೇಳಿದ್ದಾರೆ.