ಬೆಂಗಳೂರು: ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಜಾರಿಯಾದ ಮೇಲೆ ಬರ ಸೇರಿದಂತೆ ವಿಪತ್ತಿನಿಂದಾಗಿ ಹಾಳಾಗುವ ಬೆಳೆಗೆ ಪರಿಹಾರ ದೊರೆಯುವಂತಾಗಿರುವುದು ನೆಮ್ಮದಿಯ ವಿಷಯವಾಗಿದ್ದರೂ ನಿರ್ವಹಣೆಯ ವೈಫಲ್ಯ ಮತ್ತು ವಿಮಾ ಕಂಪನಿಗಳ ತಾತ್ಸಾರದಿಂದ ರೈತರಿಗೆ ತೊಂದರೆಯಾಗುತ್ತಿದೆ.
ಹೌದು ಮನುಷ್ಯರು, ಜಾನುವಾರು ಹಾಗೂ ವಾಹನಗಳಿಗಿರುವಂತೆ ಬೆಳೆಗಳಿಗೂ ವಿಮೆ ಇರುತ್ತದೆ. ಅಂದರೆ ಪ್ರಾಕೃತಿಕ ವಿಕೋಪಪದಿಂದಾಗಿ ಬೆಳೆ ಹಾಳಾದಾಗ ರೈತರಿಗೆ ಆರ್ಥಿಕ ಸಂಕಷ್ಟ ಎದುಗಾರಬಾರದು. ರೈತರಿಗೆ ಆರ್ಥಿಕ ಸಹಾಯ ನೀಡುವುದಕ್ಕಾಗಿ ಪ್ರಧಾನನಮಂತ್ರಿ ಫಸಲಿ ಬಿಮಾ ಯೋಜನೆ ಜಾರಿಗೆ ತರಲಾಗಿದೆ. ಇದನ್ನೇ ಬೆಳೆ ವಿಮೆ ಎನ್ನಬಹುದು. ರೈತರು ಕಷ್ಟಪಟ್ಟು ಜಮೀನನ್ನು ಹರಗಿ ಬಿತ್ತನೆ ಮಾಡುತ್ತಾರೆ.
ರೈತರಿಗೆ ಕೇಂದ್ರದಿಂದ ಮತ್ತೊಂದು ಬಂಪರ್ ಯೋಜನೆ! ಶೇಕಡಾ 50 ರಷ್ಟು ಸಬ್ಸಡಿ ಘೋಷಿಸಿದ ಸರ್ಕಾರ
ಮೊಳಕೆ ಒಡೆದ ನಂತರ ಜೋಪಾನವಾಗಿ ಬೆಳೆಗಳನ್ನು ನೋಡಿಕೊಳ್ಳುತ್ತಾರೆ. ಆದರೆ ಪ್ರಾಕೃತಿಕ ವಿಕೋಪಗಳಾದ ಅತೀವೃಷ್ಟಿ, ಸಿಡಿಲು ಗುಡುಗು, ಭೂ ಕುಸಿತ, ಪ್ರವಾಹಹಿಂದಾಗಿ ಬೆಳೆ ಹಾಳಾದಾಗ ರೈತರಿಗೆ ಸಹಾಯವಾಗಲು ಮುಂದೆ ಬರುತ್ತದೆ. ಬೆಳೆ ವಿಮೆ. ರೈತರು ಬೆಳೆ ವಿಮೆ ಮಾಡಿಸಿದರೆ ಮಾತ್ರ ಅವರಿಗೆ ನಷ್ಟದ ಪ್ರಮಾಣ ನೋಡಿ ವಿಮೆ ಹಣ ಪಾವತಿಸಲಾಗುವುದು. ಹಾಗಾಗಿ ರೈತರು ಬೆಳೆ ವಿಮೆ ಮಾಡಿಸಬೇಕು. ಬೆಳೆ ವಿಮೆ ಹಣ ತುಂಬಾ ಕಡಿಮೆ ಇರುತ್ತದೆ. ಇದು ರೈತರಿಗೆ ಹೊರೆಯಾಗುವುದಿಲ್ಲ.
ಬೆಳೆ ವಿಮೆ ಯಾವ ರೈತರಿಗೆ ಜಮೆಯಾಗುತ್ತದೆ?
ಬೆಳೆ ವಿಮೆ ಮಾಡಿಸಿದ ನಂತರ ಯಾವ ರೈತರು ಬೆಳೆ ಹಾಳಾದಾಗ ವಿಮಾ ಕಂಪನಿಗೆ ದೂರು ನೀಡುತ್ತಾರೋ ಆ ರೈತರಿಗೆ ವಿಮೆ ಹಣ ಜಮೆಯಾಗುತ್ತದೆ. ದೂರು ನೀಡಿದ ನಂತರ ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಬಂದು ನಷ್ಟದ ಪ್ರಮಾಣವನ್ನು ಪರಿಶೀಲಿಸಿ ಮೇಲಧಿಕಾರಿಗಳಿಗೆ ವಿಮೆ ಹಣ ಪಾವತಿಸಲು ವರದಿ ಕಳಿಸುತ್ತಾರೆ. ಆ ಆಧಾರದ ಮೇಲೆ ರೈತರಿಗೆ ವಿಮೆ ಹಣ ಪಾವತಿಸಲಾಗುವುದು.
ಬೆಳೆ ವಿಮೆ ಕಟ್ಟಿದ ರೈತರು ಬೆಳೆ ಸಂಪೂರ್ಣ ಹಾಳಾದರೂ 72 ಗಂಟೆಯೊಳಗೆ ವಿಮಾ ಕಂಪನಿಗೆ ತಿಳಿಸದೆ ಹೋದರೆ ರೈತರಿಗೆ ನಯಾ ಪೈಸೆ ಜಮೆಯಾಗುವುದಿಲ್ಲ. ಕೆಲವು ಸಲ ಹಳೆ ವಿಮಾ ಆಧಾರದ ಮೇಲೆ ನೂರಕ್ಕೆ ಒಬ್ಬ ರೈತರಿಗೆ ವಿಮೆ ಹಣ ಜಮೆಯಾಗಬಹುದು. ಆದರೆ ವಿಮೆಹಣ ಕಟ್ಟಿದ ನಂತರ ವಿಮಾ ಕಂಪನಿಗೆ ರೈತರು ದೂರು ನೀಡಿದರೆ ಹೋದರೆ ವಿಮೆ ಹಣ ಜಮೆಯಾಗುವುದಿಲ್ಲ.
ಬೆಳೆ ವಿಮೆ ಮಾಡಿಸಿದ ರೈತರು ಯಾರಿಗೆ ಸಂಪರ್ಕಿಸಬೇಕು?
ಬೆಳೆ ವಿಮೆ ಮಾಡಿಸಿದ ರೈತರು ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದಾರೋ ಆ ವಿಮಾ ಕಂಪನಿಗೆ ಸಂಪರ್ಕಿಸಬೇಕು. ಒಂದು ವೇಳೆ ವಿಮಾ ಕಂಪನಿಯ ನಂಬರ್ ಗೊತ್ತಿಲ್ಲದಿದ್ದರೆ ಬೆಳೆ ವಿಮೆ ಉಚಿತ ಸಹಾಯವಾಣಿ 1800 180 1551 ನಂಬರಿಗೆ ಕರೆ ಮಾಡಿ ನಿಮ್ಮ ಜಿಲ್ಲೆ ವಿಮಾ ಕಂಪನಿಯ ನಂಬರ್ ಪಡೆದು ಕರೆ ಮಾಡಬೇಕು.
ಬೆಳೆ ವಿಮೆ ಹಣ ಎಷ್ಟು ಜಮೆಯಾಗುತ್ತದೆ?
ಬೆಳೆ ವಿಮೆ ಮಾಡಿಸಿದ ನಂತರ ಬೆಳೆ ಎಷ್ಟು ಪ್ರಮಾಣದಲ್ಲಿ ಹಾಳಾಗಿದೆ ಹಾಗೂ ಬೆಳೆ ಯಾವ ಹಂತದಲ್ಲಿ ಹಾಳಾಗಿದೆ ಎಂಬುದನ್ನು ನಿರ್ಧರಿಸಿ ರೈತರಿಗೆ ವಿಮೆ ಹಣ ಪಾವತಿಸಲಾಗುವುದು.