ಹಾವೇರಿ:– ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಈಶ್ವರಪ್ಪ ಪಾತ್ರ ಬಹಳಷ್ಟಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಈಶ್ವರಪ್ಪ ಪಕ್ಷೇತರವಾಗಿ ನಿಲ್ಲುತ್ತಿರುವ ವಿಚಾರ ನನಗೆ ಗೊತ್ತಿಲ್ಲ. ಬಿಜೆಪಿ ಸಂಸದಿಯ ಮಂಡಳಿಯಲ್ಲಿ ಏನೇನು ನಡೆದಿದೆ ಅದೆಲ್ಲವೂ ಈಶ್ವರಪ್ಪನವರಿಗೆ ತಿಳಿದಿದೆ. ಮೊದಲು ನನ್ನ ಹೆಸರು ಇರಲಿಲ್ಲ. ಆದರೆ ನಾನು ಚುನಾವಣೆಗೆ ನಿಲ್ಲಬೇಕು ಎನ್ನುವುದು ವರಿಷ್ಠರ ತೀರ್ಮಾನ. ನಾನು ಮೋಸ ಮಾಡಿಲ್ಲ ಎಂದು ಹೇಳಿದರು
ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಬೇರೆಯವರಿಗೆ ಅವಕಾಶ ಕೊಡಿ ಎಂದು ಹೇಳಿದ್ದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಜೆಪಿ ನಡ್ಡಾ, ಅಮಿತ್ ಶಾ ತಿಳಿಸಿದ ಬಳಿಕ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಮಾಡಬೇಕಾಯಿತು ಎಂದರು