ರಾಗಿಯಿಂದ ಮಾಡಿದ ಎಲ್ಲಾ ಆಹಾರಗಳು ದೇಹಕ್ಕೆ ಎಷ್ಟು ಒಳ್ಳೆಯದು ಎಂಬುದು ನಿಮಗೆ ತಿಳಿದಿರಬಹುದು. ಆದರೆ ಮಕ್ಕಳಿಗೂ ಇಷ್ಟವಾಗುವಂತೆ ಮತ್ತು ಬಾಯಿಗೂ ರುಚಿಕೊಡಲು, ರಾಗಿಯ ಜೊತೆ ಇನ್ನೊಂದಿಷ್ಟು ಪದಾರ್ಥಗಳನ್ನು ಸೇರಿಸಿಕೊಳ್ಳುವ ಮೂಲಕ ರಾಗಿ ರೊಟ್ಟಿ ಅಥವಾ ಫಿಂಗರ್ ಮಿಲ್ಲೆಟ್ ರೊಟ್ಟಿ ಮಾಡುವ ಸರಳ ವಿಧಾನ ಇಲ್ಲಿದೆ. ರಾಗಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ ಮತ್ತು ಫೈಬರ್ ಅಧಿಕವಾಗಿದೆ ಈ ರಾಗಿ ರೊಟ್ಟಿಯನ್ನು ತಯಾರಿಸುವುದು ಸುಲಭ. .
ರಾಗಿ ರೊಟ್ಟಿ ಮಾಡಲು ಬೇಕಾಗುವ ಸಾಮಾಗ್ರಿಗಳು
ರಾಗಿ ಹಿಟ್ಟು – 1 ಕಪ್
ಸೌತೆಕಾಯಿ – 1/2 ಕಪ್
ಕ್ಯಾರೆಟ್ – 1/2 ಕಪ್
ತೆಂಗಿನಕಾಯಿ – 1/4 ಕಪ್
ಶುಂಠಿ – 1 ಇಂಚು
ಹೆಚ್ಚಿದ ಮೆಣಸಿನ ಕಾಯಿ – 1 ಸಣ್ಣಗೆ ಹೆಚ್ಚಿದ
ಜೀರಿಗೆ – 1/2 ಚಮಚ
ಸಬ್ಬಸಿಗೆ ಸೊಪ್ಪು
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಉಪ್ಪು ರುಚಿಗೆ ತಕ್ಕಷ್ಟು
ನೀರು – 1/2 ಕಪ್
ಈ ಎಲ್ಲಾ ಸಾಮಾಗ್ರಿಗಳನ್ನು ಒಂದು ಬೌಲ್ನಲ್ಲಿ ಸೇರಿಸಿಕೊಂಡು ಎಲ್ಲವನ್ನು ಮಿಶ್ರಣ ಮಾಡಿ ಹಿಟ್ಟನ್ನು ತಯಾರಿ ಮಾಡಿಕೊಳ್ಳಿ. ಇದನ್ನು ಒಂದು ಐದು ನಿಮಿಷ ಬಿಟ್ಟು ಬಳಿಕ ಆ ಹಿಟ್ಟನ್ನು ಬಾಳೆ ಎಳೆಯ ಮೇಲೆ ಹಾಕಿ ತಟ್ಟುತ್ತಾ ತೆಳುವಾದ ರೊಟ್ಟಿ ಮಾಡಿಕೊಳ್ಳಿ ಬಳಿಕ ಇದನ್ನು ತವಾ ಮೇಲೆ ಹಾಕಿ ಬಿಸಿ ಮಾಡಿಕೊಂಡು ಎರಡೂ ಬದಿಗಳಿಗೆ ಎಣ್ಣೆ ಅಥವಾ ತುಪ್ಪ ಹಾಕಿ ಬೇಯಿಸಿಕೊಂಡರೆ ರುಚಿಯಾದ ರಾಗಿ ರೊಟ್ಟಿ ಸವಿಯಲು ಸಿದ್ದವಾಗುತ್ತದೆ