ಇಂಗ್ಲೆಂಡ್ (England) ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ನಡುವೆ ಆಲ್ರೌಂಡರ್ ಮೊಯಿನ್ ಅಲಿ (Moeen Ali) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸ್ವದೇಶಿ ಸರಣಿಯಲ್ಲಿ ಇಂಗ್ಲೆಂಡ್ನ ವೈಟ್-ಬಾಲ್ ತಂಡಗಳಿಗೆ ಆಯ್ಕೆದಾರರು ಮೊಯಿನ್ ಅವರನ್ನು ಕಡೆಗಣಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಿಂದ ಹಿಂದಿನ ನಿವೃತ್ತಿಯ ಹೊರತಾಗಿಯೂ, ಮೊಯಿನ್ ODI ಮತ್ತು T20 ಕ್ರಿಕೆಟ್ ಮಾದರಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರು
ಆಸ್ಟ್ರೇಲಿಯ ಸರಣಿಗೆ ತಂಡದಲ್ಲಿ ಸೇರಿಸಿಕೊಳ್ಳದಿರುವುದು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಸಂಪೂರ್ಣವಾಗಿ ಹೊರಗುಳಿಯುವ ಅವರ ನಿರ್ಧಾರಕ್ಕೆ ಕಾರಣವಾಗಿದೆ. ಎಲ್ಲಾ ಸ್ವರೂಪಗಳಲ್ಲೂ ಮೊಯಿನ್ ಅಲಿ ಇಂಗ್ಲೆಂಡ್ಗಾಗಿ ಗಮನಾರ್ಹವಾದ ಕೊಡುಗೆ ನೀಡಿದ್ದರು. ತಮ್ಮ ಆಲ್ರೌಂಡರ್ ಕೌಶಲ್ಯಗಳೊಂದಿಗೆ ತಂಡಕ್ಕೆ ಪ್ರಮುಖ ಆಸ್ತಿಯಾಗಿದ್ದರು.
ಸಂದರ್ಶನವೊಂದರಲ್ಲಿ ನಿವೃತ್ತಿ ಬಗ್ಗೆ ಮೊಯಿನ್ ಅಲಿ ಪ್ರಸ್ತಾಪಿಸಿ, ಇಂಗ್ಲೆಂಡ್ಗಾಗಿ ಆಡಿರುವುದು ನನ್ನ ಜೀವನದ ಅತ್ಯುತ್ತಮ ದಿನಗಳು. ಕಿರಿಯ ಆಟಗಾರರೊಂದಿಗೆ ತಂಡ ಪ್ರಗತಿ ಕಾಣಲೆಂದು ಬಯಸುತ್ತೇನೆ. ಅವರಿಲ್ಲದೆ ಇಂಗ್ಲೆಂಡ್ ಮುನ್ನಡೆಯುವ ಸಮಯ ಬಂದಿದೆ ಎಂದಿದ್ದರು.
ಮೊಯಿನ್ ಅಲಿ ಇಂಗ್ಲೆಂಡ್ ಪರ 68 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 204 ವಿಕೆಟ್ಗಳನ್ನು ಪಡೆದಿದ್ದಾರೆ. 3,094 ರನ್ಗಳನ್ನು ಗಳಿಸಿದ್ದಾರೆ. ಆಲ್ರೌಂಡರ್ ಆಗಿ ಉತ್ತಮ ಕೊಡುಗೆ ನೀಡಿದ್ದಾರೆ. 138 ODI ಗಳಲ್ಲಿ 2,355 ರನ್ ಕಲೆಹಾಕಿದ್ದು, 111 ವಿಕೆಟ್ಗಳನ್ನು ಕಿತ್ತಿದ್ದಾರೆ. 92 T20 ಪಂದ್ಯಗಳಲ್ಲಿ, ಮೊಯಿನ್ 1,229 ರನ್ ಗಳಿಸಿದ್ದಾರೆ. 51 ವಿಕೆಟ್ಗಳನ್ನು ಕಿತ್ತಿದ್ದಾರೆ.