ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜನವರಿ 25ರಂದು ಆರಂಭವಾಗಲಿದೆ. ಈ ಬಗ್ಗೆ ಮಾತನಾಡಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್, ಹೈದರಾಬಾದ್ ಟೆಸ್ಟ್ನಲ್ಲಿ ಬೆನ್ ಸ್ಟೋಕ್ಸ್ ಸಾರಥ್ಯದ ಇಂಗ್ಲೆಂಡ್ ತಂಡ ತನ್ನ ಆಕ್ರಮಣಕಾರಿ ರಣನೀತಿ ‘ಬ್ಯಾಝ್ಬಾಲ್ ಕ್ರಿಕೆಟ್’ ಮೂಲಕ ಆತಿಥೇಯ ಟೀಮ್ ಇಂಡಿಯಾಗೆ ಆಘಾತ ನೀಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
“ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಟೆಸ್ಟ್ ಸರಣಿಯನ್ನು ಬಹಳ ಕಾತುರದಿಂದ ಎದುರು ನೋಡುತ್ತಿದ್ದೇನೆ. ಈ ಸರಣಿಯಲ್ಲಿ ಟ್ರೋಫಿ ಗೆಲ್ಲುವ ಫೇವರಿಟ್ ಟೀಮ್ ಇಂಡಿಯಾ ಎಂಬುದು ಸಹಜ. ಆದರೆ, ಇಂಗ್ಲೆಂಡ್ ತಂಡ ಒಂದೆರಡು ಪಂದ್ಯಗಳನ್ನು ಗೆದ್ದು ಶಾಕ್ ಕೊಡುವ ಸಾಧ್ಯತೆ ಹೆಚ್ಚಿದೆ. ಅದು ಹೈದರಾಬಾದ್ನಲ್ಲೇ ಆಗಬಹುದು. ಆಕ್ರಮಣಕಾರಿ ರಣನೀತಿ ಮೈಗೂಡಿಸಿಕೊಂಡಿರುವ ಈ ಇಂಗ್ಲೆಂಡ್ ತಂಡದ ಎದುರು ಆಡುವುದು ಅಷ್ಟು ಸುಲಭದ ಮಾತಲ್ಲ,” ಎಂದು ಮೈಕಲ್ ತಮ್ಮ ಟ್ವಿಟರ್ ಗೋಡೆಯ ಮೇಲೆ ಬರೆದುಕೊಂಡಿದ್ದಾರೆ.
ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಮತ್ತು ಕೋಚ್ ಬ್ರೆಂಡನ್ ಮೆಕಲಮ್ ಮಾರ್ಗದರ್ಶನದ ಅಡಿಯಲ್ಲಿ ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್ನಲ್ಲಿ ಒಡಿಐ ಕ್ರಿಕೆಟ್ ಮಾದರಿ ವೇಗವಾಗಿ ಬ್ಯಾಟ್ ಬೀಸುವ ರಣನೀತಿ ಅನುಸರಿಸುತ್ತಿದೆ. ಈ ಆಕ್ರಮಣಕಾರಿ ಆಟಕ್ಕೆ ‘ಬ್ಯಾಝ್ಬಾಲ್ ಕ್ರಿಕೆಟ್’ ಎಂದೇ ಹೆಸರು ಸಿಕ್ಕಿದ್ದು, ಇದರ ಬಳಕೆಯಿಂದ ಇಂಗ್ಲೆಂಡ್ ಟೆಸ್ಟ್ ತಂಡ ಸಾಕಷ್ಟು ಯಶಸ್ಸು ಕೂಡ ಗಳಿಸಿದೆ. ಹೀಗಾಗಿ ಆಕ್ರಮಣಕಾರಿ ಆಟವಾಡುವ ಇಂಗ್ಲೆಂಡ್ ಎದುರು ಆಡುವುದು ಬಹಳಾ ಕಷ್ಟದ ಕೆಲಸ. ಯಾವುದೇ ಹಂತದಲ್ಲೂ ಕಮ್ಬ್ಯಾಕ್ ಮಾಡುವ ಸಾಮರ್ಥ್ಯ ಈ ಇಂಗ್ಲೆಂಡ್ ತಂಡಕ್ಕಿದೆ ಎಂದು ವಾನ್ ವಿವರಿಸಿದ್ದಾರೆ.
ಇನ್ನು ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭಕ್ಕೆ ಇನ್ನು ಮೂರು ದಿನಗಳು ಬಾಕಿ ಇರುವ ಸಂದರ್ಭದಲ್ಲೇ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಕೊಟ್ಟು ಮೊದಲ 2 ಟೆಸ್ಟ್ಗಳಿಂದ ಹೊರಗುಳಿದಿರುವುದು ತಂಡಕ್ಕೆ ಎದುರಾದ ದೊಡ್ಡ ಹಿನ್ನಡೆಯಾಗಿದೆ.