ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ಕೂಡ ಒಂದಾಗಿದ್ದು ರಾಜ್ಯದ ಜನತೆಗೆ ಇಂಧನ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ.
ಹೊಸ ವರ್ಷ ಆರಂಭದಲ್ಲಿ ಎಸ್ಕಾಂಗಳ ಗ್ರಾಹಕರ ಖಾತೆಗೆ 37 ಪೈಸೆ ಹಣ ಜಮೆ ಮಾಡಿದ್ದಾರೆ ಇಂಧನ ಮತ್ತು ವಿದ್ಯುತ್ ಖರೀದಿ ಹೊಂದಾಣಿಕೆ ವೆಚ್ಚ ಡಿಸೆಂಬರ್ ತಿಂಗಳಲ್ಲಿ ಮೈನಸ್ ಹೀಗಾಗಿ ಎಸ್ಕಾಂ ಗ್ರಾಹಕರಗಳ ಖಾತೆಗೆ 37 ಪೈಸೆ ಜಮೆ ಮಾಡಿದ್ದಾರೆ.ಯಾವಾಗಲೂ ವಿದ್ಯುತ್ ದರ ಹೆಚ್ಚಿಸಿ ಶಾಕ್ ನೀಡುತ್ತಿದ್ದ ಎಸ್ಕಾಂಗಳು ಆದ್ರೆ ಈ ಬಾರಿ ವಿದ್ಯುತ್ ಗ್ರಾಹಕರ ಖಾತೆಗೆ 37 ಪೈಸೆ ಜಮೆ ಡಿಸೆಂಬರ್ ತಿಂಗಳಿನ ಬಿಲ್ ಮೊತ್ತದಲ್ಲಿ ಕಡಿತಗೊಳಿಸಲಾಗಿದೆ.
ಇಂಧನ ಮತ್ತು ವಿದ್ಯುತ್ ಖರೀದಿ ಹೊಂದಾಣಿಕೆ ವೆಚ್ಚ ಈ ಮಾಸಿಕದಲ್ಲಿ ಮೈನಸ್ ಬಂದಿದೆ. ಅಂದರೆ 37 ಪೈಸೆಯನ್ನು ಗ್ರಾಹಕರ ಖಾತೆಗೆ ಹಾಕಲಾಗುವುದು. ಇದು ಪೊಸಿಟಿಸ್ ಸುದ್ದಿ. ಪ್ರತಿ ಬಾರಿ ಬೆಸ್ಕಾಂ ವಿದ್ಯುತ್ ಶುಲ್ಕ ಜಾಸ್ತಿ ಮಾಡುತ್ತದೆ ಎಂದು ಹೇಳುತ್ತೀರಿ ಅಲ್ವಾ, ಆದರೆ ಈ ಬಾರಿ ಮೈನಸ್ 37 ಪೈಸೆ ಬೆಸ್ಕಾಂ ಗ್ರಾಹಕರಿಗೆ ಬಂದಿದೆ. ಇದು ಬೆಸ್ಕಾಂ ಗ್ರಾಹಕರಿಗೆ ಸಿಹಿ ಸುದ್ದಿ. ಹಾಗೆಯೇ ಉಳಿದ ಎಸ್ಕಾಂಗಳಿಗೂ ಮೈನಸ್ ಬಂದಿದೆ.
ಯಾವೆಲ್ಲಾ ಎಸ್ಕಾಂ ವ್ಯಾಪ್ತಿಯಲ್ಲಿ ಎಷ್ಟೆಷ್ಟು ಪೈಸೆ ಕಡಿತ..?
ಬೆಸ್ಕಾಂ 37 ಪೈಸೆ
ಮೆಸ್ಕಾಂ 31 ಪೈಸೆ
ಹೆಸ್ಕಾಂ 03 ಪೈಸೆ
ಜೆಸ್ಕಾಂ 51 ಪೈಸೆ
ಸೆಸ್ಕಾಂ 39 ಪೈಸೆ