ಮಂಡ್ಯ :- ಕೆ.ಆರ್.ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ ಗುಜರಾತಿನಲ್ಲಿ ಬುಧವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.
ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡದಲ್ಲಿ ತೀರ್ಪು ಪ್ರಕಟ: ಜನಸಾಮಾನ್ಯರಿಗೆ ತಿಳಿಯಬೇಕು’ ಎಂದ ಹೈಕೋರ್ಟ್!
ಮೃತರ ಪಾರ್ಥಿವ ಶರೀರವನ್ನು ಗುರುವಾರ ವಿಮಾನದ ಮೂಲಕ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಂದು ಅಲ್ಲಿಂದ ವಾಹನದ ಮೂಲಕ ಮದ್ದೂರು ತಾಲೂಕಿನ ಸೋಂಪುರ ಗ್ರಾಮಕ್ಕೆ ಗುರುವಾರ ಸಂಜೆ ಕರೆತರಲಾಯಿತು.
ಕರ್ನಾಟಕ ರಾಜ್ಯ ರೈತಸಂಘ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಸೇರಿ ಹಲವು ಸಂಘಟನೆಗಳು ಎಸ್.ಎಚ್.ಲಿಂಗೇಗೌಡ ಅವರ ಪಾರ್ಥಿವ ಶರೀರವನ್ನು ಬರಮಾಡಿಕೊಂಡು ಅಂತಿಮ ನಮನ ಸಲ್ಲಿಸಿದರು.
ತಾಲೂಕು ಆಡಳಿತದ ವತಿಯಿಂದ ತಹಸೀಲ್ದಾರ್ ಡಾ.ಸ್ಮೀತಾರಾಮು ಹಾಜರಿದ್ದು ಗೌರವ ನಮನ ಸಲ್ಲಿಸಿದರು. ಸಂಘಟನೆಗಳ ಮುಖಂಡರಾದ ನ.ಲಿ.ಕೃಷ್ಣ, ವಿ.ಸಿ.ಉಮಾಶಂಕರ್, ಸೊ.ಶಿ.ಪ್ರಕಾಶ್, ಕೊತ್ತನಹಳ್ಳಿ ಉಮೇಶ್, ವಿವೇಕ್, ಚನ್ನಸಂದ್ರ, ಕೆಂಪಣ್ಣ, ಚನ್ನಸಂದ್ರ ಲಕ್ಷ್ಮಣ, ಮಹೇಶ, ಸಿದ್ದರಾಜು, ಶ್ರೀನಿವಾಸ್, ಹೂತಗೆರೆ ಜನಾರ್ದನ, ರವಿ, ಎಸ್.ವಿಶ್ವನಾಥ್, ಸೊ.ರಾ.ಶಿವರಾಮ್ ಬಸವರಾಜ್ ಅವಿನಾಶ್ ಸೇರಿದಂತೆ ಇತರರು ಅಂತಿಮ ದರ್ಶನ ಪಡೆದರು.
ಮೃತರ ಅಂತ್ಯಕ್ರಿಯೆ ಗುರುವಾರ ಸಂಜೆ ಸ್ವಗ್ರಾಮದಲ್ಲಿ ನೆರವೇರಿತು.
ಗ್ರಾಮದಲ್ಲಿ ನಿರವ ಮೌನ ಆವರಿಸಿತ್ತು. ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿತ್ತು.
ವರದಿ : ಗಿರೀಶ್ ರಾಜ್ ಮಂಡ್ಯ