ಬೆಂಗಳೂರು: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಾಯಕತ್ವದಲ್ಲಿ ಕರ್ನಾಟಕದ ಕಾಂಗ್ರೆಸ್ ಅಂತ್ಯ ಕಾಣುತ್ತದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಭವಿಷ್ಯ ನುಡಿದಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 60 ವರ್ಷ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನನಗೆ ಇವರು ಹೇಳ್ತಾರೆ. ಇವತ್ತು ಹೇಳ್ತೀನಿ ಕರ್ನಾಟಕದಲ್ಲಿ ಇವರು ಅಂತ್ಯ ಕಾಣ್ತಾರೆ. ನಾವು ಸೋಲಿಸಿಯೇ ಸೋಲಿಸ್ತೀವಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಾಯಕತ್ವದಲ್ಲಿ ಕರ್ನಾಟಕದ ಕಾಂಗ್ರೆಸ್ ಅಂತ್ಯ ಕಾಣುತ್ತೆ ಎಂದರು
ಅಲ್ಲಿ ಮೋದಿ ಅವರು ಶ್ರೀರಾಮ ಅಂತಾರೆ. ಉಪವಾಸ, ನದಿ ಸ್ನಾನ ಇವೆಲ್ಲ ಮಾಡ್ತಾರೆ. ಇಲ್ಲಿ ಇವರಿಗೆ ಸಿದ್ದರಾಮ ಮಾತ್ರ. ಸಿದ್ದರಾಮ ಹೆಸರಿನಲ್ಲಿ NDA ಸೋಲಿಸಿ 20 ಸೀಟು ಗೆಲ್ತೀವಿ ಅನ್ನೋ ಹಿನ್ನೆಲೆಯಲ್ಲಿ ಇವೆಲ್ಲ ಸೃಷ್ಟಿ ಮಾಡ್ತಿದ್ದಾರೆ. 20 ಸೀಟು ಗೆಲ್ಲೋದು ಕನಸು ಮಾಡ್ತಿದ್ದಾರೆ. ಅದೆಲ್ಲ ಕನಸು ಮಾತ್ರ. ಈ ಬಾರಿ ಮೋದಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಎಲ್ಲರ ನಿರೀಕ್ಷೆ ಮೀರಿ ಜನ ಮೈತ್ರಿಗೆ ತೀರ್ಪು ಕೊಡ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಆಗಿರೋ ಬಗ್ಗೆ ಯಾವುದೇ ಸಂಶಯ ಬೇಡ. ಬಿಜೆಪಿ ಸರ್ಕಾರದ ಮೇಲೆ ಸಿದ್ದರಾಮಯ್ಯ ಅವರು ಎರಡು ಬಾರಿ ಸಿಎಂ ಆದ ಮೇಲೆ ಬಿಬಿಎಂಪಿ ಅಕ್ರಮದ ಬಗ್ಗೆ ತನಿಖೆ ಮಾಡ್ತೀವಿ ಅಂತಾ ಸಾವಿರ ಸಾರಿ ಹೇಳಿದ್ರು. ಆಗ ನಾವು ಅವರಿಗೆ ಬೆಂಬಲ ಕೊಟ್ಟಿದ್ವಿ. 40 ರಿಂದ 50% ಹೇಳಿ ಹೇಳಿ ಹೋದ್ರು. ಈಗ ಶ್ರೀಕಾಂತ್ ಪೂಜಾರಿ ಮೇಲೆ ಹಿಂದಿನ ಕೇಸ್ ರೀ ಓಪನ್ ಮಾಡಿ ಅದರ ಮೇಲೆ ಸೇಡು ತೆಗೆದುಕೊಂಡಿದ್ದಾರೆ. ಇದು ಸೇಡಿನ ರಾಜಕೀಯ ಮಾಡಿದ್ದಾರೆ. NDA ಜೊತೆ ಇರುವ ನಾವು ಈ ಸಮಯದಲ್ಲಿ ನಮ್ಮ ಅಭಿಪ್ರಾಯ ಹೇಳೋ ಸ್ವಾತಂತ್ರ್ಯ ಇದೆ. ಸೇಡಿನ ರಾಜಕೀಯ ಮೂಲಕ ಇವರು ತಿಳಿಯುತ್ತಿದ್ದಾರೆ. ಅ ಸಮಯದಲ್ಲಿ ನಾವು ಮಾತಾಡೋ ಅವಶ್ಯಕತೆ ಇರುತ್ತೆ ಎಂದು ಹೇಳಿದರು