ಕಲಬುರಗಿ: ಎಲ್ಲಿ ನೋಡಿದರಲ್ಲಿ ರಂಗು ರಂಗಿನ ಕಲಾಕೃತಿಗಳು. ಮಸ್ತ್ ಖುಷಿ ಕೊಡೋ ಪೇಂಟಿಂಗ್ ಗಳು.ಇದಿಷ್ಟು ಕಲಬುರಗಿಯಲ್ಲಿ ಇವತ್ತು ನಡೆದ 11 ನೇ ವರ್ಷದ ಚಿತ್ರ ಸಂತೆಯಲ್ಲಿ ಕಂಡುಬಂದ ಸೀನ್ ಗಳು. ಹೌದು ಇವತ್ತು ನಗರದ ಟೌನ್ ಹಾಲ್ ಬಳಿ ಚಿತ್ರ ಸಂತೆ ಜೋರಾಗಿತ್ತು.ಈ ಚಿತ್ರಸಂತೆ ಕಾರ್ಯಕ್ರಮಕ್ಕೆ ಹಿರಿಯ ಕಲಾವಿದ ಜೆ ಎಸ್ ಖಂಡೇರಾವ್ ಚಾಲನೆ ಕೊಟ್ರು..
ಆರ್ಟ್ ಇಂಟ್ರಿಗ್ರೇಷನ್ ಫೈನ್ ಆರ್ಟ್ ಕಾಲೇಜ್ ಮತ್ತು ಎಸ್ ಬಿ ಹಾಗು ಎನ್ ವಿ ಕಾಲೇಜಿನ ನೂರಾರು ಕಲಾವಿದರು ಚಿತ್ರ ಸಂತೆಯಲ್ಲಿ ಭಾಗವಹಿಸಿದ್ರು..ವಾಟರ್ ಕಲರ್ ಆಯಿಲ್ ಕಲರ್ ಬಳಸಿ ರಚಿಸಿದ ಕಲಾಕೃತಿಗಳು ಪ್ರದರ್ಶನದಲ್ಲಿ ಮೇಳೈಸಿದ್ದವು..11 ನೇ ವರ್ಷದ ಈ ಚಿತ್ರಸಂತೆಯಲ್ಲಿ ಕೆಲವರು ಬರೀ ವೀಕ್ಷಣೆ ಮಾಡಿದ್ರೆ ಇನ್ನೂ ಕೆಲವರು ಪೇಂಟಿಂಗ್ ಖರೀದಿಸಿದ್ದು ವಿಶೇಷವಾಗಿತ್ತು..