ಹೊಸದಿಲ್ಲಿ :- ಸಮಾಜದ ವಂಚಿತ ವರ್ಗಗಳನ್ನು ಗೌರವಿಸುವುದು ಮತ್ತು ಸಶಕ್ತೀಕರಣ ಕೇಂದ್ರದ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಜೆಪಿಯ ಡಬಲ್ ಎಂಜಿನ್ ಸರಕಾರದ ಅವಧಿಯಲ್ಲಿ ಇಂದೋರ್ನಲ್ಲಿ ಸಾವಿರಾರು ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಇದರಿಂದ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ” ಎಂದರು.
ತಮ್ಮ ನೇತೃತ್ವದ ಸರಕಾರ ಅಧಿಕಾರವನ್ನು ಸೇವಾ ರೂಪದಲ್ಲಿ ಭಾವಿಸಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹೊಸದಿಲ್ಲಿ ಯಲ್ಲಿ ಪಂಡಿತ ಮದನಮೋಹನ ಮಾಳವೀಯ ಅವರ ಬಗ್ಗೆ 11 ಭಾಗಗಳಲ್ಲಿ ಮುದ್ರಿತವಾಗಿರುವ ಕೃತಿಯ ಮೊದಲ ಆವೃತ್ತಿಯನ್ನು ಲೋಕಾರ್ಪಣೆ ಮಾಡಿದ ನಂತರ ಅವರು ಮಾತನಾಡಿದರು. ರಾಷ್ಟ್ರದ ನಿರ್ಮಾಣ ಕ್ಕಾಗಿಯೇ ಹಲವು ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಅವುಗಳು ಉತ್ತಮ ರೀತಿಯಲ್ಲಿ ದೇಶಕ್ಕೆ ಮಾರ್ಗದರ್ಶನ ನೀಡುತ್ತಿವೆ ಎಂದು ಹೇಳಿದ್ದಾರೆ.