ಖಾಲಿ ಇರುವ ಹಿರಿಯ ಎಲೆಕ್ಟ್ರೀಷಿಯನ್ ಕಂ ಸೌಂಡ್ ಸೂಪರ್ ವೈಸರ್ ಹುದ್ದೆಯನ್ನು ಪರಿಶಿಷ್ಟ ಪಂಗಡದ ಬ್ಯಾಕ್ಲಾಗ್ ಅಡಿ ಭರ್ತಿ ಮಾಡಲು ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿಗಳನ್ನು ಅರ್ಹ ಅಭ್ಯರ್ಥಿಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉತ್ತರ ಕನ್ನಡ ಜಿಲ್ಲೆಯ (ಕಾರವಾರ) ಜಿಲ್ಲಾ ರಂಗಮಂದಿರದಲ್ಲಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಹುದ್ದೆ ಕುರಿತು ಅರ್ಹತೆ, ಉದ್ಯೋಗ ಸ್ಥಳ, ಅರ್ಜಿಗೆ ಕೊನೆ ದಿನಾಂಕ, ಆಯ್ಕೆ ವಿಧಾನ, ಇತರೆ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
DK Shivakumar: HDK ಜನಪರ ಕೆಲಸ ಮಾಡಿಲ್ಲದಿರುವುದಕ್ಕೆ 10 ಸಾವಿರ ಅರ್ಜಿಗಳೇ ಸಾಕ್ಷಿ- DCM ಡಿಕೆಶಿ!
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅರ್ಜಿ ನಮೂನೆಯನ್ನು ನೀಡಿದೆ. ಅದರಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ಬರೆದು, ಜತೆಗೆ ಹುದ್ದೆಗೆ ನಿಗದಿತ ವಿದ್ಯಾರ್ಹತೆ ದಾಖಲೆಗಳನ್ನು ಲಗತ್ತಿಸಿ (ಜೆರಾಕ್ಸ್ ಪ್ರತಿಗಳು), ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ : ಭರ್ತಿ ಮಾಡಿದ ಅರ್ಜಿಗಳನ್ನು ವಿಳಾಸ- ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ.ರಸ್ತೆ ಬೆಂಗಳೂರು -560002 ಇಲ್ಲಿಗೆ ತಲುಪಿಸತಕ್ಕದ್ದು
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 03-09-2024 ಕ್ಕೆ ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಮತ್ತು ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು.
ಕನ್ನಡವನ್ನು ಒಂದು ವಿಷಯವನ್ನಾಗಿ ತೆಗೆದುಕೊಂಡು ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆಯಾಗಿರಬೇಕು. ಇದರೊಂದಿಗೆ ಟೆಲಿಕಮ್ಯೂನಿಕೇಷನ್ (ಸೌಂಡ್ ಅಂಡ್ ಟಿವಿ) ನಲ್ಲಿ ಡಿಪ್ಲೊಮ ಶಿಕ್ಷಣ ಪಡೆದಿರಬೇಕು. ಕಡ್ಡಾಯವಾಗಿ ಈ ಶಿಕ್ಷನ ಹೊರತು ಬೇರೆ ಶಿಕ್ಷಣ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಲ್ಲ.