ನೆಲಮಂಗಲ:- KPTCL ತುರ್ತು ಕಾಮಗಾರಿ ಹಿನ್ನೆಲೆ ನೆಲಂಮಗಲದ ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯದ ಬಗ್ಗೆ ಬೆಸ್ಕಾಂ ಪ್ರಕಟಣೆ ಹೊರಡಿಸಿದ್ದು, ಆಲೂರು ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಇರುವ ಹಿನ್ನೆಲೆ, ನೆಲಮಂಗಲ ತಾಲ್ಲೂಕಿನ ಈ ಕೆಳಕಂಡ ಗ್ರಾಮಗಳಲ್ಲಿ ಕರೆಂಟ್ ಕಟ್ ಇರಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.
ಬೆಳಗ್ಗೆ 10.00 ಗಂಟೆಯಿಂದ ಸಂಜೆ 05.00 ಗಂಟೆ ವರೆಗೆ ವಿದ್ಯುತ್ ಇರೋಲ್ಲ. ನೆಲಮಂಗಲ ತಾಲ್ಲೂಕಿನ ತೋಟದಗುಡ್ಡದಹಳ್ಳಿ, ನರಸಪ್ಪ ವೃತ್ತ, ಬೈರವೇಶ್ವರ ವೃತ್ತ, ಸಪ್ತಗಿರಿ ಬಾರ್ ರಸ್ತೆ, ಅಂಚೆಪಾಳ್ಯ, ಶ್ರೀಕಂಠಪುರ, ಚಿಕ್ಕಬಿದರಕಲ್ಲು, ಕೈಗಾರಿಕ ಪ್ರದೇಶಗಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.