ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Silicon City) ಕೆಲವೆಡೆ ಶನಿವಾರ ವಿದ್ಯುತ್ ವ್ಯತ್ಯಯವಾಗಲಿದೆ. ತುರ್ತು ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ನಗರದ ಕೆಲವು ಸ್ಥಳಗಳಲ್ಲಿ ವಿದ್ಯುತ್ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ.
ಇನ್ಮುಂದೆ ಐಪಿಎಲ್ ಜಿಯೋದಲ್ಲಿ ಬರಲ್ಲ: ಎಲ್ಲಾ ಕ್ರೀಡೆಗಳ ನೇರ ಪ್ರಸಾರ ಹಾಟ್ಸ್ಟಾರ್ನಲ್ಲಿ ಮಾತ್ರ!
ಇಂದು (ಅ.19) ನಗರದ 66/11 ಕೆ.ವಿ ಬ್ರಿಗೇಡ್ ಮೆಟ್ರೋಪೋಲಿಸ್ ಸ್ಟೇಷನ್ನಲ್ಲಿ 31.5 ಎಮ್.ವಿ.ಎ ಶಕ್ತಿ ಪರಿವರ್ತಕ-01, 66/11 ಕೆ.ವಿ ಶೋಭಾ ಸಿಟಿ ಉಪ-ಕೇಂದ್ರ ಹಾಗೂ 66/11 ಕೆ.ವಿ ರಾಜರಾಜೇಶ್ವರಿ ನಗರ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಹೆಚ್ಜಿ ಶೀಲಾ ಬಿಲ್ಡಿಂಗ್ ಔಟರ್ ರಿಂಗ್ ರೋಡ್, ಬ್ರಿಗೇಡ್ ಮೆಟ್ರೋಪೋಲಿಸ್ ಡೆಫ್ ಬ್ಲಾಕ್, ದೇವಸಂದ್ರ ಇಂಡಸ್ಟ್ರಿಯಲ್ ಎಸ್ಟೇಟ್, ಬ್ರಿಗೇಡ್ ನಲ್ಪಾಡ್ ಬಿಲ್ಡಿಂಗ್, ಡಬ್ಲ್ಯುಎಫ್ಡಿ ಮುಖ್ಯ ರಸ್ತೆ, ಮಾಲ್, ಬ್ರಿಗೇಡ್ ಮೆಟ್ರೋಪೋಲಿಸ್ ಎಬಿಸಿ ಬ್ಲಾಕ್, ನೆಟಾಪ್ ಇಂಡಿಯಾ ಪ್ರೈ ಲಿಮಿಟೆಡ್, ದರ್ಗಾ ಪೆಟಲ್ಸ್ ಅಪಾರ್ಟ್ಮೆಂಟ್, ಔಟರ್ ರಿಂಗ್ ರೋಡ್, ಬ್ಯಾಗ್ಮನೆ ಐಟಿ ಪಿ, ಶೋಭಾ ಸಿಟಿ, ಚೊಕ್ಕನಹಳ್ಳಿ, ಡೋಮಿನೊಜ್ ಪಿಜ್ಜಾ ಇನ್ ಪ್ಯಾರಡೈಸ್ ನೂರ್ ನಗರ, ಎಕ್ಸ್ ಸರ್ವಿಸ್ಮೆನ್ ಲೇಔಟ್, ಪೊಲೀಸ್ ಕ್ವಾಟ್ರರ್ಸ್, ಆರ್ಕೆ ಹೆಗ್ಡೆ ನಗರ, ಶಬರಿ ನಗರ, ಹೊಸ ಶಾಂತಿ ನಗರ, ಕೆಂಪೇಗೌಡ ಲೇಔಟ್, ನಾಗೇನಹಳ್ಳಿ ಗ್ರಾಮ, ಬಾಲಾಜಿ ಲೇಔಟ್, ನಾಗೇನಹಳ್ಳಿ ಜಿಮ್, ಥಣಿಸಂದ್ರ, ಬೆಳ್ಳಹಳ್ಳಿ ಗ್ರಾಮ, ತಿರುಮೇನಹಳ್ಳಿ ಗ್ರಾಮ, ಮಿತ್ತಗಾನಹಳ್ಳಿ ಮತ್ತು ಕೋಗಿಲು ಗ್ರಾಮ, ಬೆಲಹಳ್ಳಿ, ವಿಧಾನಸೌಧ ಲೇಔಟ್, ಐಡಿಯಲ್ ಹೋಮ್ಸ್, ಉತ್ತರಹಳ್ಳಿ, ಸಚ್ಚಿದಾನಂದ ನಗರ, ವಡ್ಡರ ಪಾಳ್ಯ, ಗಾಮಕಲ್ಲು, ಬೆಮಲ್ ಲೇಔಟ್, ಬಿಹೆಚ್ಸಿಎಸ್ ಲೇಔಟ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ