ಟೆಸ್ಲಾ ಕಂಪನಿಯ ಸಿಇಒ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ‘X’ ಕಂಪನಿಯ ಮಾಲೀಕ ಎಲಾನ್ ಮಸ್ಕ್ ಜಗತ್ತಿನ ಶ್ರೀಮಂತರಲ್ಲಿ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ‘ಬ್ಲೂಮ್ಬರ್ಗ್’ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಎಲಾನ್ ಮಸ್ಕ್ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದು ಅವರ ಆಸ್ತಿಯ ಒಟ್ಟು ನಿವ್ವಳ ಮೌಲ್ಯ. 400 ಬಿಲಿಯನ್ ಅಮೇರಿಕನ್ ಡಾಲರ್ ಆಗಿದೆ.
400 ಬಿಲಿಯನ್ ಅಮೇರಿಕನ್ ಡಾಲರ್ ಮೌಲ್ಯದ ಆಸ್ತಿ ಹೊಂದುವ ಮೂಲಕ ಎಲಾನ್ ಮಕ್ಸ್ ಮತ್ತೊಂದು ದಾಖಲೆ ಬರೆದಿದ್ದಾರೆ. ಇಷ್ಟು ದೊಡ್ಡ ಮೊತ್ತದ ಆಸ್ತಿ ಹೊಂದಿರುವ ಏಕೈಕ ವ್ಯಕ್ತಿ ಎಲಾನ್ ಮಸ್ಕ್ ಎನಿಸಿಕೊಂಡಿದ್ದಾರೆ. ಎಲಾನ್ ಮಸ್ಕ್ ಅವರ ರಾಕೆಟ್ ತಯಾರಿಕಾ ಕಂಪನಿಯ ಸ್ಪೇಸ್ಎಕ್ಸ್ ಮೌಲ್ಯಮಾಪನವನ್ನು ಸುಮಾರು 350 ಶತಕೋಟಿ ಡಾಲರ್ ಗೆ ಹೆಚ್ಚಿಸುವ ಒಪ್ಪಂದ ಮಾಡಿಕೊಡಿದ್ದಾರೆ. ಇದರಿಂದ ಅವರ ಆಸ್ತಿ ಏಕಕಾಲಕ್ಕೆ 20 ಬಿಲಿಯನ್ ಅಮೇರಿಕನ್ ಡಾಲರ್ ಹೆಚ್ಚಾಗಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ.
ಕಳೆದ ತಿಂಗಳು ನಡೆದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಲುವು ಸಾಧಿಸಿರುವುದರಿಂದ ಎಲಾನ್ ಮಸ್ಕ್ ಕಂಪನಿಗಳ ಷೇರುಗಳಲ್ಲಿ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಬಂದಿದೆ. ಇದರಿಂದ ಎಲಾನ್ ಮಸ್ಕ್ ಅವರ ವೈಯಕ್ತಿಕ ಸಂಪತ್ತಿನಲ್ಲಿ ದೊಡ್ಡ ಪ್ರಮಾಣದ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.