ಬೆಂಗಳೂರು:– ಹಾಸನಾಂಬೆ ದರ್ಶನದ ವೇಳೆ ವಿದ್ಯುತ್ ಪ್ರವಹಿಸಿದ ವಿಚಾರವಾಗಿ ಮಾಜಿ ಸಚಿವ ಶಾಸಕ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೆಳಗ್ಗೆ ಘಟನೆ ನಡೆದದ್ದು ವಿಷಯ ಗೊತ್ತಾಯಿತು. ಸಂಬಂಧಿಸಿದವರ ಜೊತೆ ಮಾತಾಡಿದೆ. ಮೆಡಿಕಲ್ ಕಾಲೇಜು ವೈದ್ಯಾಧಿಕಾರಿ ಜೊತೆ ಮಾತಾಡಿದೆ. ಅಸ್ವಸ್ಥ ಹೆಣ್ಣು ಮಗಳಿಗೆ ಚಿಕಿತ್ಸೆ ಕೊಡುತ್ತಿರೋದಾಗಿ ಹೇಳಿದ್ದಾರೆ.
ದಿನಾ ಒಂದು ಲಕ್ಷ ಜನ ಬರ್ತಿದ್ದಾರೆ. ಹಲವು ಇಲಾಖೆ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡ್ತಿದ್ದಾರೆ. ಕೆಲ ಅಧಿಕಾರಿಗಳು ಅವರೇ ಆಸ್ಪತ್ರೆಗೆ ಸೇರುವಂತಾಗಿದೆ. ಇಲ್ಲಿಯವರೆಗೂ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ಆದ್ರೆ ಈಗ ಅಂತ ಘಟನೆ ಆಗಿದೆ. ಮುಂದೆ ಆಗದಂತೆ ತಾಯಿ ಕಾಪಾಡಲಿ. ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇನೆ. ಇಂಧನ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ಜಿಲ್ಲಾಧಿಕಾರಿ ಬೆಂಗಳೂರಿಗೆ ಬಂದಿದ್ರು. ಅವರಿಗೂ ವಿಚಾರ ಗೊತ್ತಿಲ್ಲ ಎಂದರು.
ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿ, ಮೈತ್ರಿ ಬಗ್ಗೆ, ಜೆಡಿಎಸ್ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳೋದು ಬೇಡ. ಯಾರೂ ಜೆಡಿಎಸ್ ಮುಳುಗೋಯ್ತು ಅಂತ ತಿಳಿಯೋದು ಬೇಡ. ಏನೂ ಇಲ್ಲ ಜೆಡಿಎಸ್ ಮುಗಿದೋಯ್ತು ಅಂತಿದ್ರು. ದೇವೇಗೌಡರು 114 ಸೀಟು ಗೆದ್ದು, ಲೋಕಸಭಾ ಕ್ಷೇತ್ರದಲ್ಲಿ 18 ಸೀಟು ಗೆದ್ದು ಪ್ರಧಾನಿ ಕೂಡ ಆಗಿದ್ರು. ಜೆಡಿಎಸ್ ಮುಗಿಸೋಕೆ ಸಾಧ್ಯವಿಲ್ಲ ಎಂದರು.
ಜೆಡಿಎಸ್ ಶಾಸಕರು ಕಾಂಗ್ರೆಸ್ಗೆ ಬರ್ತಾರೆ ಎಂದು ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿ, ಇದೆಲ್ಲ ಹೋಗಿ ಬಂದು ಏನಾಗಿದೆ. ಜೆಡಿಎಸ್ ನಿಂದ ಎಳೆದುಕೊಳ್ಳೋದು ಅಂತಿದ್ದಾರೆ. ಹಿಂದೆ ಏನಾಗಿತ್ತು ನಿಮಗೆ ಗೊತ್ತು. ಕಾಂಗ್ರೆಸ್ 120 ಸ್ಥಾನ ಇದ್ದಿದ್ದು 80ಕ್ಕೆ ಬಂದಿತ್ತು. ಮತ್ತೆ ಅಂತದ್ದೇ ಪರಿಸ್ಥಿತಿ ಬರಲಿದೆ ಎಂದರು.
ಜೆಡಿಎಸ್ 3ನೇ ಎರಡರಷ್ಟು ಕಾಂಗ್ರೆಸ್ಗೆ ಬರ್ತಾರೆ ಅಂತ ಸಚಿವ ರಾಜಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ಬಂದ್ರೆ ಅವರನ್ನೆಲ್ಲ ಕರೆದುಕೊಳ್ಳಲು ಹೇಳಿ ಅಂತ ರೇವಣ್ಣ ಟಾಂಗ್ ನೀಡಿದ್ದಾರೆ.