ಮಂಗಳೂರು:– ಮುಂದೆಯೂ ಬಿಜೆಪಿ ಅಧಿಕಾರಕ್ಕೆ ಬಂದ್ರೆ ದೇಶದಲ್ಲಿ vಚುನಾವಣೆಯೇ ನಡೆಯಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನಮ್ಮ ರಾಜ್ಯಕ್ಕೆ ದುಡ್ಡು ಎಷ್ಟು ಬರಬೇಕು ಅದು ಬರುತ್ತಿಲ್ಲ. ನಮ್ಮ ಪಾಲಿನ ಹಣ ಸಿಗುತ್ತಿಲ್ಲ. ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ನಮ್ಮ ಮೊದಲ ಗ್ಯಾರಂಟಿ ಎಂಎಸ್ಪಿ ಖಾತರಿ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೆ ತರುತ್ತೇವೆ. ಮುಂದೆಯೂ ಬಿಜೆಪಿ ಅಧಿಕಾರಕ್ಕೆ ಬಂದ್ರೆ ದೇಶದಲ್ಲಿ ಚುನಾವಣೆಯೇ ನಡೆಯಲ್ಲ. ಸರ್ವಾಧಿಕಾರ ಬರುತ್ತೆ. ಮೋದಿಯನ್ನು ಶಕ್ತಿಶಾಲಿಯಾಗಿ ಮಾಡಬೇಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.
ಇವತ್ತು ಕೆಲ ಪಕ್ಷಗಳು ನಮ್ಮನ್ನು ಹೊಡೆಸಿ ಸತತವಾಗಿ ಆಳಬೇಕೆಂದು ಹೊರಟಿದ್ದಾರೆ. ಮೋದಿ ಏನಾದರೂ ಜಮೀನು ಕೊಟ್ರಾ..? ಮೋದಿ ಹೇಳಿದ ನೌಕರಿ ನಿಮಗೆ ಸಿಕ್ತಾ? ಮಂಗಳೂರಿನವರು ಬಹಳ ಬುದ್ದಿವಂತ ಜನರಿದ್ದಾರೆ. ದೇಶದ ಪ್ರಧಾನಮಂತ್ರಿ ಹೇಗೆ ಸುಳ್ಳಾಡುತ್ತಾರೆ. ನಾವು ಆರು ಗ್ಯಾರಂಟಿ ಕೊಟ್ಟಿದ್ದೇವೆ. ಇವತ್ತು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವೆ. ಮೋದಿ ಮೋದಿ ಅಂದ್ರೆ ಹೊಟ್ಟೆ ತುಂಬುತ್ತಾ ಎಂದು ಪ್ರಶ್ನಿಸಿದರು.
ಮಂಗಳೂರಿನಲ್ಲಿ ಮುಂಜಾನೆ ಎದ್ದ ಕೂಡಲೇ ಕಾಂಗ್ರೆಸ್ ಗೆ ಬೈತಾರೆ. ಇದು ಯಾವ ನ್ಯಾಯ..? ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ಬಡವರನ್ನು ತುಳಿಯಬೇಕು ಎಂಬುವುದೇ ಗುರಿ. ನೀವು ಈಗ ಓಡಾಡುವ ಸೇತುವೆ ಆಗಿದ್ದು ಕಾಂಗ್ರೆಸ್ ಕಾಲದಲ್ಲಿ. ಇಷ್ಟೊಂದು ಕೊಟ್ಟಿದ್ದರೂ ಅವರೇ ನಮ್ಮ ವಿರುದ್ಧ ಮಾತನಾಡ್ತಿದ್ದಾರೆ. ಬಿಜೆಪಿ ಮಾತು ಕೇಳಿ ಇಲ್ಲಿ ಒಬ್ಬರಿಗೊಬ್ಬರುಹೊಡೆದಾಡಿಕೊಳ್ಳುತ್ತಿದ್ದಾರೆ. ಇಲ್ಲಿನ ಬಡವರಿಗೆ ಅಧಿಕಾರ ಕೊಟ್ಟಿದ್ದು ಸಹ ಕಾಂಗ್ರೆಸ್ ಪಾರ್ಟಿ. ಹಿಂದೆ ಮಾಡಿದ ಗ್ಯಾರಂಟಿ ಮರೆತರೆ, ಆದ್ರೆ ಈಗ ಕೊಟ್ಟಿರುವ ಗ್ಯಾರಂಟಿಯನ್ನಾದರೂ ನೆನಪಿಡಿ ಎಂದು ಹೇಳಿದರು.