ಬೆಂಗಳೂರು:- DCM ಡಿಕೆ ಶಿವಕುಮಾರ್ ಅವರ ಆ ಒಂದು ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಎಲ್ಲಾ ದೆಹಲಿಯಲ್ಲಿ ತೀರ್ಮಾನ ಆಗಿದೆ. ಸ್ವಲ್ಪ ದಿನ ಸುಮ್ಮನಿರಿ ಅಂತ ಒಕ್ಕಲಿಗ ನಾಯಕರಿಗೆ ಡಿ.ಕೆ.ಶಿವಕುಮಾರ್ ಸಂದೇಶ ಕೊಟ್ಟಿದ್ದಾರೆ
ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತಾಡೋ ಮುನ್ನ ಹುಷಾರ್, ತಕ್ಷಣ ಬೀಳುತ್ತೆ ಈ ಕೇಸ್!
ಮೈಸೂರಿನಲ್ಲಿ ಆಯೋಜಿಸಿದ್ದ ಒಕ್ಕಲಿಗರ ಸಭೆಯಲ್ಲಿ ಭಾನುವಾರ ಮಾತನಾಡಿದ ಡಿಕೆ ಶಿವಕುಮಾರ್ ಅವರು, ದೆಹಲಿಯಲ್ಲಿ ಏನು ಆಗಬೇಕೋ, ಎಲ್ಲಾ ತೀರ್ಮಾನ ಆಗಿದೆ. ಸ್ವಲ್ಪ ದಿನ ಕಾಯಿರಿ, ನೀವು ಎಲ್ಲರೂ ನನ್ನ ಬೆಂಬಲಕ್ಕೆ ನಿಲ್ಲಬೇಕು. ಈಗ ಅದರ ಬಗ್ಗೆ ಚರ್ಚೆಗಳು ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಅಖಾಡದಲ್ಲಿ ಇಷ್ಟು ದಿನ ಒಕ್ಕಲಿಗ ದಾಳ ಉರುಳಿಸ್ತಿದ್ದ ಡಿ.ಕೆ.ಶಿವಕುಮಾರ್ ಈಗ ಒಕ್ಕಲಿಗ ನಾಯಕತ್ವದ ಜೊತೆ ಒಕ್ಕಲಿಗ ‘ಸಿಎಂ ಅಸ್ತ್ರ’ವನ್ನೂ ಪ್ರಯೋಗಿಸಿದ್ದಾರೆ. ಸ್ವಲ್ಪ ದಿನ ತಡ್ಕೊಳಿ, ದೆಹಲಿಯಲ್ಲೇ ತೀರ್ಮಾನ ಆಗಿದೆ ಅನ್ನೋ ಮೂಲಕ ಮುಖ್ಯಮಂತ್ರಿ ಕುರ್ಚಿ ಬದಲಾವಣೆ ಮಾತಿಗೆ ಮತ್ತಷ್ಟು ಒಗ್ಗರಣೆ ಹಾಕಿದ್ದಾರೆ
ಮೈಸೂರಲ್ಲಿ ಏಪ್ರಿಲ್ 1ರಂದು ವರುಣಾ ಕ್ಷೇತ್ರದಲ್ಲೂ ಮುಖ್ಯಮಂತ್ರಿಗಳು ಸಿಎಂ ಕುರ್ಚಿಗೆ ಕಂಟಕ ಇದೆ ಅನ್ನೋದನ್ನ ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ಗೆ 60 ಸಾವಿರ ಲೀಡ್ನಲ್ಲಿ ಗೆಲ್ಲಿಸಿ. ನಾನು ಸಿಎಂ ಕುರ್ಚಿಯಲ್ಲಿ ಇರ್ಬೇಕೋ ಬೇಡ್ವೋ ಅಂತಾನೂ ಪ್ರಶ್ನಿಸಿದ್ದರು. ಈಗ ಡಿ.ಕೆ.ಶಿವಕುಮಾರ್ ಮತ್ತೆ ಅದೇ ಲಕ್ಷ್ಮಣ್ರನ್ನ ಗೆಲ್ಲಿಸಿಕೊಡಿ. ಅವರು ಸೋತರೆ ನಮಗೆಲ್ಲಾ ತೊಂದರೆ. ಒಕ್ಕಲಿಗ ನಾಯಕರಾದ ಚಲುವರಾಯ ಸ್ವಾಮಿ, ವೆಂಕಟೇಶ್ಗೆ ತೊಂದರೆ. ಕೃಷ್ಣ ಬೈರೇಗೌಡ ಸೇರಿ ಎಲ್ಲರಿಗೂ ತೊಂದರೆ ಅನ್ನೋ ಸಂದೇಶ ಕೊಟ್ಟಿದ್ದಾರೆ.
ಒಕ್ಕಲಿಗರ ಹೆಸರಲ್ಲಿ ರಾಜಕೀಯ ಏನಾದರೂ ಇರಲಿ. ಆದರೆ ಲೋಕಸಭೆ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗುತ್ತೆ ಅನ್ನೋ ಮಾತುಗಳು ನಿಜವಾಗ್ತಿದೆ. ಇಷ್ಟುದಿನ ಮೌನವಾಗಿದ್ದ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ತೀರ್ಮಾನ ಆಗಿದೆ ಅನ್ನೋ ಮೂಲಕ ಮುಖ್ಯಮಂತ್ರಿ ಆಗುವ ಕನಸನ್ನ ಹೊರಹಾಕಿದ್ದಾರೆ.