ಕಂಪ್ಲಿ :- ಪುರಸಭೆ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆ ಗುರುವಾರ ಜರುಗಿದ್ದು ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಿ.ಪ್ರಸಾದ ಉಪಾಧ್ಯಕ್ಷರಾಗಿ ಸುಶೀಲಮ್ಮ ಆಯ್ಕೆಗೊಂಡರು.
ಮುಡಾ ಕೇಸ್ ನಲ್ಲಿ ಸಿದ್ದರಾಮಯ್ಯ ಹೆಸರು ಕೆಡಿಸಲು ಬಿಜೆಪಿ ಯತ್ನ: ದಿನೇಶ್ ಗುಂಡೂರಾವ್!
ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಭಟ್ಟ ಪ್ರಸಾದ್ ಹಾಗೂ ಬಿಜೆಪಿ ಯಿಂದ ಟಿ.ವಿ.ಸುದರ್ಶನರೆಡ್ಡಿ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಸುಶೀಲಮ್ಮ ಬಿಜೆಪಿ ಯಿಂದ ಹೇಮಾವತಿ ಪೂರ್ಣಚಂದ್ರ ನಾಮ ಪತ್ರ ಸಲ್ಲಿಸಿದ್ದು ಯಾರು ನಾಮ ಪತ್ರ ಹಿಂಪಡೆಯದ ಹಿನ್ನೆಲೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಜರುಗಿತು.
ಬಿಜೆಪಿಯ 13 ಜನ ಸದಸ್ಯರಲ್ಲಿ 10 ಜನ ಹಾಜರಿದ್ದು, ಕಾಂಗ್ರೆಸ್ ನ 10 ಜನ ಸದಸ್ಯರೊಂದಿಗೆ ಬಳ್ಳಾರಿ ಸಂಸದ ಈ. ತುಕಾರಾಂ, ಶಾಸಕ ಜೆ.ಎನ್.ಗಣೇಶ್ ಚುನಾವಣೆಯಲ್ಲಿ ಭಾಗಿಯಾಗಿ ಮತ ಚಲಾಯಿಸಿದರು. ಬಳಿಕ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭಟ್ಟ ಪ್ರಸಾದ್ 12 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಟಿ.ವಿ.ಸುದರ್ಶನ್ ರೆಡ್ಡಿ 10 ಮತಗಳನ್ನು ಪಡೆಯುವ ಮೂಲಕ ಪರಭವಗೊಂಡರು.
ಕಾಂಗ್ರೆಸ್ ಅಭ್ಯರ್ಥಿ ಸುಶೀಲಮ್ಮ 12 ಮತಗಳನ್ನು ಪಡೆಯುವ ಮೂಲಕ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹೇಮಾವತಿ ಪೂರ್ಣಚಂದ್ರ 10 ಮತ ಮತಗಳನ್ನು ಪಡೆಯುವ ಮೂಲಕ ಸೋಲನ್ನು ಕಂಡರು ಎಂದು ಚುನಾವಣಾಧಿಕಾರಿ ಶಿವರಾಜ ಶಿವಪುರ ಘೋಷಿಸಿದರು. ನಂತರ ಸಂಸದ ಇ.ತುಕಾರಾಂ ಅವರು ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿ ಬಳಿಕ ಮಾತನಾಡಿ, ಕಂಪ್ಲಿ ಪುರಸಭೆ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಜತೆಗೆ ಹೆಚ್ಚಿನ ಅಭಿವೃದ್ಧಿ ಕಾರ್ಯದೊಂದಿಗೆ ಹೆಸರು ತರಬೇಕು . ನಂತರ ಪುರಸಭೆ ಅಧ್ಯಕ್ಷರ ಗದ್ದುಗೆ ಕಾಂಗ್ರೆಸ್ ಪಾಲಾದ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.