ಪೀಣ್ಯ ದಾಸರಹಳ್ಳಿ : ಬೆಂಗಳೂರು ಉತ್ತರ ತಾಲ್ಲೂಕಿನ ಆಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪುಷ್ಪಲತಾ ಮಂಜುನಾಥ್ ಹಾಗೂ ಉಪಾಧ್ಯಕ್ಷರಾಗಿ ಪದ್ಮಾವತಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ. ಡಾ.ಬಿ ಆರ್ ರವಿಕುಮಾರ್ ಸಹಾಯಕ ನಿರ್ದೇಶಕರು ಪಶುಪಾಲನಾ ಇಲಾಖೆ ಘೋಷಣೆ ಮಾಡಿದರು.
ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಸಿಎಂ ಎ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಪುಷ್ಪಲತಾ ಮಂಜುನಾಥ ಅವಿರೋಧ ಆಯ್ಕೆಯಾದರೆ ಉಪಾಧ್ಯಕ್ಷ ಸ್ಥಾನಕ್ಕೆ ಸುನಿತಾ ಮತ್ತು ಪದ್ಮಾವತಿ ನಾಮಪತ್ರ ಸಲ್ಲಿಸಿದ್ದರು.
ಸಾಮಾನ್ಯ ಸಭೆ ಕರೆದು ನಾಮಪತ್ರ ಪರಿಶೀಲನೆ ಮಾಡಲಾಯಿತು. ಆಲೂರು ಗ್ರಾಮ ಪಂಚಾಯಿತಿಯ 27 ಸದಸ್ಯರು ಸಭೆಗೆ ಹಾಜರಿದ್ದರು. ಯಾರೂ ನಾಮಪತ್ರ ವಾಪಸ್ ಪಡೆಯದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಇದ್ದುದರಿಂದ ಪುಷ್ಪಲತಾ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಸಿದ್ದರಿಂದ ಗುಪ್ತ ಮತದಾನ ನಡೆಸಲಾಯಿತು. ಗುಪ್ತ ಮತದಾನದಲ್ಲಿ ಪದ್ಮಾವತಿ16 ಮತಗಳು ಪ್ರತಿ ಸ್ಪರ್ಧಿ 11 ಮತ ಪಡೆದರು. ಹೆಚ್ಚು ಮತ ಪಡೆದ ಪದ್ಮಾವತಿ ಅವರನ್ನು ಉಪಾಧ್ಯಕ್ಷರು ಎಂದು ಪ್ರಕಟಿಸಲಾಯಿತು.
ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಅಧಿಕಾರ ಸ್ವೀಕರಿಸಿ ಅಧ್ಯಕ್ಷರಾದ ಪುಷ್ಪಲತಾ ಮಾತನಾಡಿ, ನಾವು ಜನರ ಸೇವಕರು. ಜನರ ಆಶಯಕ್ಕೆ ತಕ್ಕಂತೆ ಕಾನೂನಾತ್ಮಕ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು ಹಾಗೆ ಅಧ್ಯಕ್ಷರನ್ನಾಗಿ ಆಯ್ಕೆ ಯಾಗಲು ಸಹಕಾರ ನೀಡಿದ ಎಲ್ಲಾ ಸದಸ್ಯರು ಹಿರಿಯ ಮುಖಂಡರು ಗಳಿಗೆ ಮತ್ತು ನಮ್ಮ ಯಲಹಂಕ ಶಾಸಕರಾದ ಎಸ್ ಆರ್ ವಿಶ್ವನಾಥ್ ಅವರಿಗೂ ಹೃದಯ ಪೂರ್ವಕ ಧನ್ಯವಾದಗಳು ತಿಳಿಸಿದರು,
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್ ಚುನಾವಣಾ ಅಧಿಕಾರಿ ಹಾಗೂ ಎಲ್ಲಾ ಸದಸ್ಯರು ಮುಖಂಡರು ಮುಂತಾದವರಿದ್ದರು ಮಾದನಾಯಕನಹಳ್ಳಿ ಪೊಲೀಸ್ ಸಿಬ್ಬಂದಿ ಬಂದೋಬಸ್ಥ ಕಲ್ಪಿಸಿದ್ದರು.