ದೆಹಲಿ: ಇನ್ನೇನು ಕೆಲವು ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಈ ಬೆನ್ನಲ್ಲೇ ಚುನಾವಣಾ ಆಯುಕ್ತ ಅರುಣ್ ಗೋಯೆಲ್ (Arun Goel) ಅವರು ದಿಢೀರ್ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದರು. ಇವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಕೂಡ ಅಂಗೀಕರಿಸಿದ್ದಾರೆ.
ಇಂದಿನಿಂದ 5, 8, 9ನೇತರಗತಿ ಮಕ್ಕಳಿಗೆ ಬೋರ್ಡ್ ಪರೀಕ್ಷೆ: 28.14 ಲಕ್ಷ ವಿದ್ಯಾರ್ಥಿಗಳು ಭಾಗಿ
ಗೋಯೆಲ್ ಅವರು ರಾಜೀನಾಮೆ ನೀಡುವುದಕ್ಕೂ ಮೊದಲು ಎಂದಿನಂತೆ ತನ್ನ ಕೆಲಸದಲ್ಲಿ ತೊಡಗಿದ್ದರು. ಮಾರ್ಚ್ 7 ರಂದು ಚುನಾವಣಾ ಆಯೋಗದ ನಿರ್ವಚನ ಸದನ್ ಕಚೇರಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಭೆಯೊಂದನ್ನು ಆಯೋಜಿಸಿತ್ತು. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ EC ಮತ್ತು ಅಂತರರಾಷ್ಟ್ರೀಯ ಮಾಧ್ಯಮದ ಸದಸ್ಯರ ನಡುವಿನ ಸಂವಾದದಲ್ಲಿ ಗೋಯೆಲ್ ಭಾಗವಹಿಸಿದ್ದರು.
ಇದಕ್ಕೂ ಮುನ್ನ, ಮಾರ್ಚ್ 4 ಮತ್ತು 5 ರಂದು, ಕುಮಾರ್ ಮತ್ತು ಗೋಯೆಲ್ ಅವರು ಚುನಾವಣಾ ಸಿದ್ಧತೆಯನ್ನು ನಿರ್ಣಯಿಸಲು ವಿವಿಧ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾ ಪೂರ್ವ ಚುನಾವಣಾ ಆಯೋಗದ ಸಾಂಪ್ರದಾಯಿಕ ಭೇಟಿಗಳ ಭಾಗವಾಗಿ ಪಶ್ಚಿಮ ಬಂಗಾಳಕ್ಕೆ ಭೇಟಿ ಕೊಟ್ಟಿದ್ರು. ಈ ಸಂದರ್ಭದಲ್ಲಿ ಅವರು ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾಗಿತ್ತು. ಆದರೂ ಅವರು ಮಾರ್ಚ್ 4 ರ ರಾತ್ರಿ 8 ಗಂಟೆಯವರೆಗೆ ನಡೆದ ಎಲ್ಲಾ ಸಭೆಗಳಲ್ಲಿಯೂ ಭಾಗವಹಿಸಿದ್ದರು.