ಎಂಟು ತಿಂಗಳ ದೇಶಿಯ ತಳಿಯಾದ ಕಿಲಾರಿ ಆಕಳ ಕರು ಎರಡು ಲಕ್ಷ ಹತ್ತು ಸಾವಿರ ರೂ.ಗೆ ಮಾರಾಟವಾಗಿದೆ
ಈಗ ಕಿಲಾರಿ ತಳಿಯೂ ಅಳಿವಿನ ಅಂಚಿನಲ್ಲಿದ್ದು ಇದನ್ನು ರಕ್ಷಿಸುವುದು ನಮ್ಮೆಲರ ಆದ್ಯ ಕರ್ತವ್ಯವಾಗಿದೆವೆಂದು ನಿಪ್ಪಾಣಿ ಸಮಾದಿಲಿಂಗ ಮಠದ ಸ್ವಾಮೀಜಿ ಅವರ ಅಭಿಪ್ರಾಯ.
ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಅವರಖೋಡ ಗ್ರಾಮದ ಅಣ್ಣಪ್ಪ ನಿಕ್ಕಮ ಎಂಬ ರೈತ ಜವಾರಿ ಆಕಳನ್ನು ಸಾಕಿ ಎಲ್ಲರಿಗೂ ಮಾದರಿಯಾಗಿದ್ದಾನೆ.
ಈ ಕರುವನ್ನು ಮತ್ತು ತಾಯಿಯನ್ನು ಅವರಖೋಡ ಗ್ರಾಮಸ್ಥರು ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ ಸ್ವಾಮೀಜಿ ಅವರಿಗೆ ಹಸ್ತಾಂತರಿಸಿದರು.
ಈಗ ಎಚ್.ಎಫ್ ತಳಿ(ಆಕಳು) ಹೆಚ್ಚು ಹಾಲು ಕೊಡುತ್ತೆ ಎಂಬ ಕಾರಣಕ್ಕೆ ದೇಶಿ ತಳಿ ಸಾಕುವವರ ಸಂಖ್ಯೆ ಕ್ರಮೇಣ ಕುಗ್ಗುತ್ತಿದೆ.
ಎಂಟು ತಿಂಗಳ ಕಿಲಾರಿ ಕರುವನ್ನು ನಿಪ್ಪಾಣಿ ತಾಲ್ಲೂಕಿನ ಸಮಾಧಿಲಿಂಗ ಮಠದ ಸ್ವಾಮೀಜಿಗಳಾದ ಪ್ರಾಣಲಿಂಗ ಶ್ರೀಗಳು ಕೊಳ್ಳುವುದರ ಮೂಲಕ ಸಾಕಿದಂತ ರೈತರನ್ನು ಪ್ರೋತ್ಸಾಹಿಸಿದ್ದಾರೆ.
ದೇಶಿಯ ತಳಿಗಳನ್ನು ಸಾಕಿ ನಿರುದ್ಯೋಗವನ್ನು ಹೋಗಲಾಡಿಸಿ ಎಂದು ಯುವಜನತೆಗೆ ಕಿವಿ ಮಾತು ಹೇಳಿದರು.