ಮೊಟ್ಟೆ ಸಸ್ಯಾಹಾರವೋ ಮಾಂಸಾಹಾರವೋ ಎಂಬ ಚರ್ಚೆ ಬಹಳ ದಿನಗಳಿಂದ ನಡೆಯುತ್ತಿದೆ. ಜನರು ಬೇರೆ ಬೇರೆ ವಾದಗಳಿಂದ ತಮ್ಮ ಮಾತನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ. ಕೆಲವರು ಕೋಳಿ ಮೊಟ್ಟೆ ಇಡುತ್ತದೆ, ಹಾಗಾಗಿ ಇದು ಮಾಂಸಾಹಾರ ಎಂದು ಹೇಳುತ್ತಾರೆ. ಆದರೆ ಕೆಲವರು ಪ್ರಾಣಿಗಳು ಹಾಲು ಕೊಡುತ್ತವೆ ಎಂದ ಮಾತ್ರಕ್ಕೆ ಹಾಲನ್ನು ಮಾಂಸಾಹಾರ ಎನ್ನಲಾಗುವುದಿಲ್ಲ. ಹಾಗೇ ಕೋಳಿ ಮೊಟ್ಟೆ ಕೂಡ ಮಾಂಸಾಹಾರವಲ್ಲ ಎಂದು ವಾದ ಮಾಡುತ್ತಾರೆ. ಹಾಗಾದರೆ ಕೋಳಿ ಮೊಟ್ಟೆ ಮಾಂಸಾಹಾರಿಯೇ? ಅಂದರೆ ಹಾಲು ಸಸ್ಯಾಹಾರವಾದರೆ ಮೊಟ್ಟೆ ಏನು?
ಹುಷಾರ್! ಈ ದಿನ ಕೂದಲು ಕತ್ತರಿಸಿದ್ರೆ ನಿಮ್ಮ ಆಯಸ್ಸು ಕಮ್ಮಿ ಆಗುತ್ತೆ!
ಕೋಳಿಯಿಂದ ಹೊರಬರುವ ಮೊಟ್ಟೆಗಳನ್ನು ಮಾಂಸಾಹಾರಿ ಎಂದು ಭಾವಿಸಿ ಹೆಚ್ಚಿನ ಜನರು ಮೊಟ್ಟೆಗಳನ್ನು ತಿನ್ನುವುದಿಲ್ಲ. ಈ ಬಗ್ಗೆ ಸಂಶೋಧಕರು ವಿವರವಾದ ಮಾಹಿತಿ ನೀಡಿದ್ದಾರೆ. ಮೊಟ್ಟೆಯಲ್ಲಿ 3 ಪದರಗಳಿವೆ, ಅದರಲ್ಲಿ ಮೇಲಿನ ಪದರವು ಸಿಪ್ಪೆ, ಎರಡನೇ ಬಿಳಿ ಭಾಗವು ಅಲ್ಬುಮೆನ್ ಮತ್ತು ಮೂರನೆಯದು ಮೊಟ್ಟೆಯ ಹಳದಿ ಲೋಳೆ ಎಂದು ಅವರು ಹೇಳಿದರು. ಬಿಳಿ ಭಾಗವು ಪ್ರೋಟೀನ್ ಮಾತ್ರ ಎಂದು ಸಂಶೋಧನೆ ಕಂಡುಹಿಡಿದಿದೆ. ಇದು ಯಾವುದೇ ಪ್ರಾಣಿ ಪದಾರ್ಥವನ್ನು ಹೊಂದಿರುವುದಿಲ್ಲ. ಅಂದರೆ, ಮೊಟ್ಟೆಯ ಬಿಳಿ ಭಾಗವು ಸಂಪೂರ್ಣವಾಗಿ ಸಸ್ಯಾಹಾರಿಯಾಗಿದೆ” ಎಂದು ಹೇಳಿದ್ದಾರೆ.
ಮೊಟ್ಟೆಗಳ ವಿಧಗಳು:
ಮೊಟ್ಟೆಗಳಲ್ಲಿ ನಾವು ಎರಡು ರೀತಿಯ ವಿಧಗಳನ್ನು ಕಾಣಬಹುದು. ಅವುಗಳಲ್ಲಿ ಒಂದು ಫಲವತ್ತಾದ ಮೊಟ್ಟೆಗಳು. ಮತ್ತೊಂದು ಫಲವತ್ತಾಗದ ಮೊಟ್ಟೆಗಳು.
ಫಲವತ್ತಾದ ಮೊಟ್ಟೆಗಳು: ಮೊಟ್ಟೆಗಳನ್ನು ಫಲವತ್ತಾಗಿಸಲು, ಮೊಟ್ಟೆಯ ರಚನೆಯ ಮೊದಲು ಕೋಳಿ ಮತ್ತು ಹುಂಜವನ್ನು ಸಂಯೋಗಿಸಲು ಅವಕಾಶ ಮಾಡಿಕೊಡಬೇಕು. ಇದರ ನಂತರ ಕೋಳಿ ತಾನು ಹಾಕಿದ ಮೊಟ್ಟೆಗಳನ್ನು ಫಲವತ್ತಾಗಿಸಲಾಗುತ್ತದೆ.
ಫಲವತ್ತಾಗದ ಮೊಟ್ಟೆಗಳು: ಕೋಳಿಯು ಸಂಯೋಗ ನಡೆಸದೇ ಹಾಗೇ ಇಡುವ ಮೊಟ್ಟೆಗಳು ಫಲವತ್ತಾಗದ ಮೊಟ್ಟೆಗಳಾಗಿರುತ್ತವೆ.
ಕೋಳಿಯು ಫಲವತ್ತಾದ ಮೊಟ್ಟೆಗಳನ್ನು ಇಡಬೇಕೆಂದರೆ ಅದು ಹುಂಜದ ಜೊತೆ ಸಂಯೋಗ ಮಾಡಬೇಕಾಗುತ್ತದೆ. ಬೇಗನೆ ಮೊಟ್ಟೆಗಳು ಸಿಗಬೇಕೆಂಬ ಮಾರುಕಟ್ಟೆ ಧೋರಣೆಯಿಂದ ಕೋಳಿಗಳನ್ನು ತಳಿ ಮಾಡುವ ಸಾಕಣೆ ಕೇಂದ್ರಗಳು ಇಂದು ಎಲ್ಲೆಲ್ಲೂ ಕಾಣ ಸಿಗುತ್ತವೆ. ಫಲೀಕರಣ ಪ್ರಕ್ರಿಯೆಯ ಸಮಯದಲ್ಲಿ ಹುಂಜಗಳನ್ನು ಕೋಳಿಯಿಂದ ದೂರವಿರಿಸಿ.
ಜನರು ಕೆಲವೊಮ್ಮೆ ಮೊಟ್ಟೆಯೊಳಗೆ ರಕ್ತದ ಕಲೆಗಳನ್ನು ಕಂಡುಕೊಳ್ಳುತ್ತಾರೆ, ಅದನ್ನು ಜನಿಸಬೇಕಿದ್ದ ಮರಿಯ ರಕ್ತ ಎಂದು ತಪ್ಪಾಗಿ ಭಾವಿಸುತ್ತಾರೆ. ಅದಕ್ಕೆ ಅವರು ಈ ರಕ್ತದ ಕಲೆಗಳನ್ನು ಮಾಂಸದ ಕಲೆಗಳು ಎಂದೂ ಕರೆಯುತ್ತಾರೆ, ಇದರ ಅರ್ಥ ಮೊಟ್ಟೆಯು ಫಲವತ್ತಾಗಿದೆ ಎಂದು ಅರ್ಥವಲ್ಲ. ಮೊಟ್ಟೆಯ ಹಳದಿ ಲೋಳೆಯು ರೂಪುಗೊಂಡಾಗ ಮತ್ತು ಕೋಳಿಯ ರಕ್ತನಾಳವು ಒಡೆದಾಗ ರಕ್ತವು ಬರುತ್ತದೆ. ಇದರ ಕಾರಣವಾಗಿ ಮೊಟ್ಟೆಯನ್ನು ಮಾಂಸಹಾರಿ ಎನ್ನುವುದು ಸರಿಯಲ್ಲ. ಮೊಟ್ಟೆ ಸಸ್ಯಾಹಾರಿ ಆಹಾರ ಆಗಿದೆ.
ಮುಂದಿನ ಬಾರಿ ಮೊಟ್ಟೆಯಲ್ಲಿ ರಕ್ತದ ಕಲೆಗಳು ಕಂಡುಬಂದರೆ. ನೀವು ಆಘಾತಕ್ಕೆ ಒಳಗಾಗಬೇಡಿ. ಏಕೆಂದರೆ, ಮೊಟ್ಟೆಗಳು ಕೋಳಿಗಳಿಂದ ಬರುತ್ತವೆ ಆದರೂ ಕೂಡ ಅವುಗಳನ್ನು ಉತ್ಪಾದಿಸಲು ಕೋಳಿಗಳನ್ನು ಯಾರು ಸಾಯಿಸುವುದಿಲ್ಲ. ಹೌದು ತಾನೆ. ಮಾಂಸಹಾರ ಎಂದರೆ ಒಂದು ಪ್ರಾಣಿಯನ್ನು ಕೊಂದು ಅದರ ಮಾಂಸವನ್ನು ತಿನ್ನುವುದು. ಆದರೆ ಇಲ್ಲಿ ಹಸು ಹೇಗೆ ಹಾಲನ್ನು ತನ್ನ ದೇಹದಿಂದ ಉತ್ಪತ್ತಿ ಮಾಡಿ, ಕೊಡುತ್ತದೆಯೋ ಹಾಗೆಯೇ ಕೋಳಿಯು ಸಹ ತನ್ನ ದೇಹದಿಂದ ಈ ಮೊಟ್ಟೆಯನ್ನು ಉತ್ಪತ್ತಿ ಮಾಡುತ್ತದೆ ಎಂದರೆ ಮೊಟ್ಟೆ ಸಸ್ಯಾಹಾರಿ ಎಂದು ಒಪ್ಪಿಕೊಳ್ಳಲೇ ಬೇಕು.