ಬಿಗ್ ಬಾಸ್ ಸೀಸನ್ 17ರ ವಿಜೇತ ಹಾಗೂ ಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಖಿ ಮೇಲೆ ಮೊಟ್ಟೆ ಎಸೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮೊಟ್ಟೆ ಎಸೆದಿರುವ ರೆಸ್ಟೊರೆಂಟ್ ಮಾಲೀಕನ ಮೇಲೆ ಕೇಸು ದಾಖಲಾಗಿದೆ.
ಮುಂಬೈನ ಮೊಹಮ್ಮದ್ ಅಲಿ ರಸ್ತೆಯಲ್ಲಿರುವ ಮಿನಾರಾ ಮಸೀದಿ ಪ್ರದೇಶದಲ್ಲಿದ್ದ ರೆಸ್ಟೋರೆಂಟ್ ವೊಂದಕ್ಕೆ ಮುನಾವರ್ ಫಾರೂಖಿ ಅವರನ್ನು ಇಫ್ತಾರಿಗೆ ಆಹ್ವಾನಿಸಿದ್ದರು. ಆದರೆ ಬಳಿಕ ಬೇರೊಂದು ಹೋಟೆಲ್ ಅನ್ನು ಆಯ್ಕೆ ಮಾಡಿಕೊಂಡರಂತೆ. ಇದರಿಂದ ಕುಪಿತಗೊಂಡ ರೆಸ್ಟೋರೆಂಟ್ ಮಾಲೀಕ ಮುನಾವರ್ ಮೇಲೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಮುನಾವರ್ ಮೇಲೆ ರೆಸ್ಟೋರೆಂಟ್ ಮಾಲೀಕ ಮೊಟ್ಟೆ ಎಸೆದಿರುವ ದೃಶ್ಯ ಮೊಬೈಲ್ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಆರು ಮಂದಿ ವಿರುದ್ಧ ಪೈದೋನಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.