ಬೆಂಗಳೂರು: ಬಿಎಂಆರ್ಸಿಎಲ್ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ್ದು ಸಾಕಷ್ಟ ಆಕ್ರೋಶಕ್ಕೆ ಕಾರಣವಾಗಿತು. ಆಕ್ರೋಶದ ಬಳಿಕ ದರ ಕಮ್ಮಿಮಾಡಿದ್ದರು ಪ್ರಯಾಣಿಕರು ಯಾವುದೇ ಪ್ರಯೋಜನವಿಲ್ಲ. ಜನಗಳ ಕಣ್ಣೋರಸಲು ಮಾತ್ರವೇ ದರ ಕಡಿತಗೊಳಿಸಲಾಗಿತ್ತು. ಇದೀಗ ದರ ಜಾಸ್ತಿಯಾದ ಹಿನ್ನೆಲೆಯಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ.
ಗುರುವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮಹಿಳಾ ಐಪಿಎಲ್ ಪಂದ್ಯ ವೀಕ್ಷಣೆ ಸಂದರ್ಭದಲ್ಲೂ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಆರ್ಸಿಬಿ ಹಾಗೂ ಗುಜರಾತ್ ನಡುವಿನ ಕ್ರಿಕೆಟ್ ಪಂದ್ಯ ವೀಕ್ಷಿಸಲು ಬಹುತೇಕ ಜನರು ಮೆಟ್ರೋ ಮೂಲಕವೇ ಬಂದಿದ್ದರು. ಆದರೆ ಈ ಹಿಂದಿಗಿಂತ ಕಡಿಮೆ ಸಂಖ್ಯೆಯಲ್ಲಿ ಜನರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಯಟ್, ವ್ಯಾಯಾಮ ಯಾವುದೂ ಇಲ್ಲದೇ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು..! ಹೇಗೆ ಗೊತ್ತಾ..?
ಮಹಾ ಶಿವರಾತ್ರಿದಂದು ಮೆಟ್ರೋ ಪ್ರಯಾಣಿಕರ ಸಂಖ್ಯೆ 5.20 ಲಕ್ಷಕ್ಕಿಳಿದಿದೆ. ದರ ಏರಿಕೆಗಿಂತ ಮೊದಲು ವಾರದ ದಿನಗಳಲ್ಲಿ ಸರಾಸರಿ 8.5 ಲಕ್ಷ ಪ್ರಯಾಣಿಕರ ಓಡಾಟವಿತ್ತು. ದರ ಏರಿಸಿದ ಬಳಿಕ ಪ್ರತಿದಿನ ಸರಾಸರಿ 1.20 ಲಕ್ಷದಷ್ಟು ಕಡಿಮೆಯಾಗಿತ್ತು. ಮಂಗಳವಾರದಂದು 7.82 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣಿಸಿದ್ದರು.
ಪ್ರತಿ ಭಾನುವಾರ ಮತ್ತು ರಜಾ ದಿನಗಳಲ್ಲಿ 7 ಲಕ್ಷದ ಆಸುಪಾಸಿನಲ್ಲಿ ಪ್ರಯಾಣಿಕರ ಸಂಖ್ಯೆ ಇರ್ತಿತ್ತು. ದರ ಏರಿಕೆಯ ಬಳಿಕ ಸೋಮವಾರದಿಂದ ಶುಕ್ರವಾರದವರೆಗೆ ಮೆಟ್ರೋದಲ್ಲಿ ಸಂಚರಿಸುವವರ ಸಂಖ್ಯೆ 7.74 ಲಕ್ಷದಷ್ಟು ಇರುತ್ತಿತ್ತು. ಆದ್ರೆ ದಿನೇ ದಿನೇ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿದೆ.