ಮಂಡ್ಯ: ವಿದ್ಯೆಯಿಂದ ಉದ್ಯೋಗದ ಜೊತೆಗೆ ಸಂಸ್ಕಾರವೂ ಪ್ರಾಪ್ತಿಯಾಗಬೇಕು ಆಗ ಮಾತ್ರ ಬದುಕಿಗೆ ಸಾರ್ಥಕತೆ ಇರುತ್ತದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ. ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುದು ಸರ್ಕಾರದ ಆಶಯ ಅದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಅವರು ಹೇಳಿದರು.
ಶಿಕ್ಷಣ ಎಂದರೆ ಕೇವಲ ಪಠ್ಯವಲ್ಲ , ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳೂ ವಿಕ್ತತ್ವ ವಿಕಾಸಕ್ಕೆ ಸಹಕಾರಿ ಎಂದರು. ವಿದ್ಯಾರ್ಥಿಗಳು ಅಂಕ ಗಳಿಕೆಗೆ ಮಾತ್ರ ಪ್ರಾಮುಖ್ಯತೆ ನೀಡದೆ ಸಾಮಾನ್ಯ ಜ್ಞಾನ, ವಿವೇಕ ಬೆಳೆಸಿಕೊಳ್ಳಬೇಕು ಎಂದು ಸಚಿವರು ಕಿವುಮಾತು ಹೇಳಿದರು.
ಇದೇ ವೇಳೆ ಕೃಷಿ ಸಚಿವರು ಸಿದ್ದಗಂಗಾ ಹಾಗೂ ಆದಿ ಚುಂಚನಗಿರಿ ಮಠಗಳಲ್ಲಿ ತಾವು ಕಲಿತ ಶಿಕ್ಷಣ , ಸಂಸ್ಕಾರರವನ್ನು ಸ್ಮರಿಸಿದರು. ನಾಗಮಂಗಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಜೊತೆಗೆ ಹೊಸದಾಗಿ ಬಿ.ಎಸ್.ಸಿ, ಎಂ.ಎಸ್.ಸಿ., ಎಂ.ಎಸ್.ಸಿ., ಎಂ.ಎಸ್ .ಡಬ್ಲ್ಯೂ ಮತ್ತಿತರ ಕೋರ್ಸ್ ಗಳನ್ನು ಪ್ರಾರಂಭಿಲಾಗುವುದು ಎಂದು ಸಚಿವರು ಭರವಸೆ ನೀಡಿದರು.