ಕೋಲಾರ :- ಭಾರತದ ದೇಶದಲ್ಲಿ ಅತ್ಯಂತ ಕಡಿಮೆ ಹಣದಲ್ಲಿ ಬಡವರಿಗೆ ಶಿಕ್ಷಣ ಸಿಗುತ್ತಿದೆ ವಿದ್ಯಾವಂತ ಮಂದಿ ಸಾರ್ವತ್ರಿಕ ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸುವುದಿಲ್ಲವೋ ಅಲ್ಲಿಯತನಕ ಈ ದೇಶದಲ್ಲಿ ಭ್ರಷ್ಟ ಅಧಿಕಾರಿಗಳು ಭ್ರಷ್ಟ ರಾಜಕಾರಣಿಗಳು ರಾಜ್ಯ ಅಧಿಕಾರ ಮಾಡುತ್ತಾರೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿಗಳಾದ ನಿರಂಜನ ವಾನಳ್ಳಿಯವರು ಅವ್ರು ಹೇಳಿದ್ರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಲಾರದಲ್ಲಿ 2023- 24 ನೇ ಸಾಲಿನ ವಾರ್ಷಿಕ ಸಾಂಸ್ಕೃತಿಕ ಕ್ರೀಡಾ ಎನ್ಎಸ್ಎಸ್ ಮತ್ತು ಗೈಡ್ಸ್ ಯುವ ರೆಡ್ ಕ್ರಾಸ್ ಎನ್ ಸಿ ಸಿ ಚಟುವಟಿಕೆಗಳ ಸಮಾರೋಪ ಸಮಾರಂಭ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ರು, ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರು ಪಾಠ ಮಾಡುವುದೇ ಅವರ ಕೆಲಸವಲ್ಲ ವಿದ್ಯಾರ್ಥಿಗಳಿಗೆ ಸರಿಯಾದ ದಾರಿಯನ್ನು ಹುಡುಕಿ ಕೊಡುವ ಕೆಲಸ ಮಾಡಬೇಕೆಂದು ತಿಳಿಸಿದರು. ಕೇವಲ ನಾಲ್ಕು ಗೋಡೆ ಮಧ್ಯೆ ಮಾತ್ರ ವಿದ್ಯಾರ್ಥಿಗಳು ಆಲೋಚನೆ ಮಾಡದೆ ಆದ್ದರಿಂದ ಆಚೆ ಕೂಡ ಸಮಾಜ ಇದೇ ಎಂಬುದನ್ನು ಮನಗಂಡು ತಮ್ಮ ತಂದೆ ತಾಯಿಗಳಿಗೆ ಕೀರ್ತಿ ತರಬೇಕೆಂದರು. ಕಲಿತ ವಿದ್ಯೆ ತನಗೆ ಅಲ್ಲದೆ ತನ್ನ ಸುತ್ತಮುತ್ತಲಿನ ಮಂದಿಯನ್ನು ಸಹ ವೈಜ್ಞಾನಿಕ ಪ್ರಜ್ಞೆ ಮೂಡಿಸುವಲ್ಲಿ ಅವರಿಗೆ ಮಾರ್ಗದರ್ಶನ ಆಗುವಲ್ಲಿ ಮನವರಿಕೆ ಮಾಡಿಕೊಡಬೇಕೆಂದು ಕೋರಿದರು.
ಪ್ರಾಂಶುಪಾಲರಾದ ಕೆ ಶ್ರೀನಿವಾಸಗೌಡರವರು ಮಾತನಾಡಿ ಸರ್ಕಾರಿ ಕಾಲೇಜುಗಳಲ್ಲಿ ಸಾಮಾನ್ಯವಾಗಿ ಎಲ್ಲ ಮಕ್ಕಳು ಬಡ ಮಾಧ್ಯಮದ ವರ್ಗದ ಕೈಯಿಂದ ಬಂದಿರುವ ನೀವುಗಳು ನಿಮ್ಮ ತಂದೆ ತಾಯಿಗಳಿಗೆ ಒಳ್ಳೆ ಕೀರ್ತಿಯನ್ನು ನಿಮ್ಮ ಭವಿಷ್ಯತ್ತಿನ ಬಗ್ಗೆ ಸದಾ ಕಾಳಿ ವಹಿಸಿ ಸಮಾಜದಲ್ಲಿ ಪೈಪೋಟಿ ಹೆಚ್ಚು ಹೆಚ್ಚಾಗಿ ಇರುವುದರಿಂದ ಅದನ್ನು ಹೇಗೆ ಎದುರಿಸಬೇಕು ಹೇಗೆ ಉನ್ನತ ಸ್ಥಾನಕ್ಕೆ ಏರಬೇಕೆಂದು ಕರೆನೀಡಿದರು.
ಕೆ ವಿ ಸತೀಶ್ ಡಾಕ್ಟರ್ ಮುರುಳಿಧರ್ ಎಸ್ ತ್ಯಾಗರಾಜ್ ಸಮಾಜಕಾರ್ಯ ಮುಖ್ಯಸ್ಥರಾದ ಮುರಳಿ ಕಾಲೇಜಿನ ಮ್ಯಾನೇಜರ್ ಮಂಜುನಾಥ ಪ್ರಸನ್ನ ಕುಮಾರಿ ಪ್ರೊಫೆಷನಲ್ ಮಹೇಶ್ ಡಾ. ವಿಜಯ್ ಇತಿಹಾಸ ವಿಭಾಗದ ಮುನಿರಾಜು ರತ್ನಪ್ರಭಾ ನಾಗನಾಳಾ ಮುನಿಯಪ್ಪ ಮುಂತಾದವರು ಹಾಜರಿದ್ದರು ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರೀಡೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.