ಧಾರವಾಡ : ಮುಡಾ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಮಹತ್ವದ ಹೆಜ್ಜೆ ಇಟ್ಟಿದೆ. ಇಡಿ ತನಿಖೆಯ ಮೊದಲ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಿದೆ. ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನಲರ್ ಅರವಿಂದ್ ಕಾಮತ್ ರವರು ಇಲ್ಲಿಯವರೆಗಿನ ಇಡಿ ತನಿಖಾ ವರದಿಯನ್ನು ಕಾಫಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಮುಡಾ ಹಗರಣದ ತನಿಖೆ ನಡೆಸುತ್ತಿರುವ ಇಡಿ ಈಗಾಗಲೇ 142 ಸೈಟ್ ಗಳ ಜನ್ಮ ಜಾಲಾಡಿದ್ದು, ಈ ಹಿಂದೆಯೇ 142 ಸೈಟ್ ಗಳನ್ನು ಮಾರಾಟ ಮಾಡದಂತೆ ತಡೆ ಹಾಕಿತ್ತು ಕೂಡ. ಮೈಸೂರು ಸಬ್ ರಿಜಿಸ್ಟರ್ ಕಚೇರಿಗೆ ಮರು ಮಾರಾಟ, ನೋಂದಣಿ ಪ್ರಕ್ರಿಯೆ ನಡೆಸದಂತೆ ತಿಳಿಸಿತ್ತು.
ಈಗ ಅದೇ 142 ಸೈಟ್ ಗಳ ಮಾಲೀಕರ, ಸಂಬಂಧಿಗಳ ಖಾತೆಗಳನ್ನು ಜಾಲಾಡಿದ್ದು, ಅದಕ್ಕೆ ಸಂಬಂಧಿಸಿದ ತನಿಖಾ ವರದಿ ಹೈಕೋರ್ಟ್ ಗೆ ಸಲ್ಲಿಸಿದ್ದಾರೆ. ಈ 142 ಸೈಟ್ ಗಳಲ್ಲಿ ಅನೇಕರು ಮೊಮ್ಮಕ್ಕಳಿಗೆ ಸೈಟ್ ಕೊಟ್ಟಿದ್ದಾರೆ. ತಾವು ಮುಚ್ಚಿದ ಲಕೋಟೆಯ ದಾಖಲೆಗಳನ್ನು ನೋಡಬಹುದು. ಇದನ್ನು ಆಧರಿಸಿಯೇ ನಾವು ಪಾರ್ವತಿ, ಭೈರತಿಯವರ ಸಂಬಂಧಿಕರ ಮಾಹಿತಿ ಕೇಳುತ್ತಿದ್ದೇವೆ ಎಂದು ಕಾಮತ್ ವಾದ ಮುಂದಿಟ್ಟಿದ್ದು, ಈ ಮೂಲಕ ED 14 ಸೈಟ್ ಮಾತ್ರವಲ್ಲ, ಇಡೀ ಮುಡಾ ಅಕ್ರಮದ ಮೇಲೆಯೇ ಕಣ್ಣಿಟ್ಟಿರೋ ಸುಳಿವು ಕೊಟ್ಟಿದ್ದಾರೆ. ಸದ್ಯ ಧಾರವಾಡ ಹೈಕೋರ್ಟ್ ವಾದ ಪ್ರತಿವಾದ ಮಂಡಿಸಿದ್ದು, ತೀರ್ಪು ಕಾಯ್ದಿರಿಸಿದೆ.