ಕೋಲಾರ: ಮಾಲೂರಿನ ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ನಂಜೇಗೌಡರು ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಯಲ್ಲಿರುವ ಮನೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಕೋಲಾರ ತಾಲೂಕಿನ ಹುತ್ತೂರು ಹೋಬಳಿಯಲ್ಲಿರುವ ಕೋಚಿಮುಲ್, ಕೊಮ್ಮನಹಳ್ಳಿ ನಂಜುಂಡೇಶ್ವರ ಸ್ಟೋನ್ ಕ್ರಷರ್ ಕಚೇರಿ ಮೇಲೆಯೂ ದಾಳಿ ನಡೆದಿದ್ದು,
ಇದಕ್ಕಿಂತ ಒಳ್ಳೆ ಸೇವಿಂಗ್ಸ್ ಮತ್ತೊಂದಿಲ್ಲ..! ದಿನಕ್ಕೆ 50 ರೂಪಾಯಿ ಉಳಿಸಿ 30 ಲಕ್ಷ ನಿಮ್ಮದಾಗಿಸಿಕೊಳ್ಳಿ.!
ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ. ಕೋಚಿಮುಲ್ ಹಾಲು ಒಕ್ಕೂಟದ ಎಂ.ಡಿ ಗೋಪಾಲಮೂರ್ತಿ, ಆಡಳಿತ ವಿಭಾಗದ ವ್ಯವಸ್ತಾಪಕ ನಾಗೇಶ್ ಸೇರಿ ವಿವಿಧ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದಿದೆ. ಶಾಸಕ ನಂಜೇಗೌಡ ಆಪ್ತ ಸಹಾಯಕ ಹರೀಶ್ ಅವರ ದೊಡ್ಡಮಲ್ಲೆ ಗ್ರಾಮದಲ್ಲಿರುವ ನಿವಾಸದ ಮನೆ ಮೇಲೂ ಇಡಿ ದಾಳಿ ನಡೆದಿದೆ. ಒಟ್ಟು 15ಕ್ಕೂ ಅಧಿಕ ಕಡೆ ಜಾರಿ ನಿರ್ದೇಶಾನಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಕೋಚಿಮುಲ್ ನೇಮಕಾತಿ ವಿಚಾರದಲ್ಲಿ ಸಾಕಷ್ಟು ಅವ್ಯವಹಾರದ ಸದ್ದು ಮಾಡಿತ್ತು. ನೇಮಕಾತಿ ವೇಳೆ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿರುವ ಅರೋಪ ಕೇಳಿ ಬಂದಿತ್ತು.