ಮಂಗಳೂರು:- ಬೀಡಿ ಉದ್ಯಮಿ ಮನೆಗೆ ಇಡಿ ಹೆಸರಿನಲ್ಲಿ ದಾಳಿ ನಡೆದಿದ್ದು, 30 ಲಕ್ಷದೊಂದಿಗೆ ನಕಲಿ ಅಧಿಕಾರಿಗಳು ಪರಾರಿ ಆಗಿದ್ದಾರೆ.
ಮಾರ್ಫಿಂಗ್ ವಿಡಿಯೋ ಹರಿಬಿಟ್ಟ ಆರೋಪ: DCM ಡಿಕೆಶಿ ಸೇರಿ ಇತರರ ವಿರುದ್ಧ ಆರ್ ಅಶೋಕ್ ದೂರು!
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಬೋಳಂತೂರುನಲ್ಲಿ ಈ ಘಟನೆ ನಡೆದಿದೆ. ಬೀಡಿ ಉದ್ಯಮ ನಡೆಸುತ್ತಿದ್ದ ಬೋಳಂತೂರು ನಾರ್ಶ ಎಂಬಲ್ಲಿನ ನಿವಾಸಿ ಸುಲೈಮಾನ್ ಹಾಜಿ ಎಂಬವರ ಮನೆಗೆ ನಿನ್ನೆ ತಡ ರಾತ್ರಿ ತಮಿಳುನಾಡು ಮೂಲದ ಕಾರಿನಲ್ಲಿ ನಾಲ್ಕು ಜನರ ತಂಡ ಆಗಮಿಸಿದೆ.
ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಬೆಳಗ್ಗಿನ ಜಾವದವರೆಗೂ ತನಿಖೆ ನಡೆಸುವ ನಾಟಕವಾಡಿದ್ದರು. ಬಳಿಕ ಮನೆಯಲ್ಲಿ ಸಿಕ್ಕಿದ್ದ 30 ಲಕ್ಷ ನಗದು ಹಿಡಿದುಕೊಂಡು ಪರಾರಿಯಾಗಿದ್ದರು.
ಅನುಮಾನಗೊಂಡ ಸುಲೈಮಾನ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು ವಿಟ್ಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ