ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯಗೆ ಇಡಿ ನೋಟಿಸ್ ಜಾರಿ ಮಾಡಿರುವ ವಿಚಾರವಾಗಿ BY ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ತೆಂಗಿನ ಎಣ್ಣೆಯನ್ನು ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಏನಾಗತ್ತೆ!? ಈ ಸಮಸ್ಯೆ ನಿಮ್ಮ ಬಳಿ ಸುಳಿಯಲ್ಲ!
ನಗರದಲ್ಲಿ ಮಾತನಾಡಿದ ಅವರು, ಇಡಿ ನೋಟಿಸ್ ಸಿದ್ದರಾಮಯ್ಯಗೆ ದೊಡ್ಡ ಆಘಾತ ತಂದಿದೆ. ಲೋಕಾಯುಕ್ತದಿಂದ `ಬಿ’ ರಿಪೋರ್ಟ್ ತೆಗೆದುಕೊಂಡು ಬರುವ ಲೆಕ್ಕಾಚಾರದಲ್ಲಿ ಸಿಎಂ ಇರುವಾಗ ಇಡಿಯಿಂದ ನೋಟಿಸ್ ಕೊಡಲಾಗಿದೆ. ಅವರ ಧರ್ಮಪತ್ನಿಯವರಿಗೆ ಹಾಗೂ ಬೈರತಿ ಸುರೇಶ್ ಅವರಿಗೆ ಇಡಿ ನೋಟಿಸ್ ಕೊಡಲಾಗಿದೆ. ಇವರಿಬ್ಬರು ತನಿಖೆಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಇಡಿ ನೋಟಿಸ್ ಸಿದ್ದರಾಮಯ್ಯರಿಗೆ ದೊಡ್ಡ ಆಘಾತ ತಂದಿದೆ. ಆದರೆ ಡಿಕೆ ಶಿವಕುಮಾರ್ಗೆ ಸಂತಸ ತಂದಿದೆ ಎಂದರು.
ಇನ್ನೂ ಇಡಿ ನೋಟಿಸ್ ಕೊಟ್ಟಿರೋದು ಡಿಕೆಶಿಗೆ ಒಳಗೊಳಗೇ ಸಂತೋಷ ತಂದಿರುತ್ತದೆ. ಇದರಲ್ಲಿ ಅಚ್ಚರಿ ಏನಿಲ್ಲ. ನಾನು ಡಿಕೆಶಿ ಅವರ ಹೇಳಿಕೆಯನ್ನು ಗಮನಿಸಿದೆ ಎಂದು ಟೀಕೆ ಮಾಡಿದರು.