ಬೆಂಗಳೂರು: ಮುಡಾ ಹಗರಣ ಸಂಬಂಧ ಸಚಿವ ಬೈರತಿ ಸುರೇಶ್ ಗೆ ಇಡಿ ನೋಟಿಸ್ ನೀಡಿದ್ದು ಇಂದು ಬೆಳಗ್ಗೆ ಹೆಬ್ಬಾಳದ ಮನೆಗೆ ತೆರಳಿ ನೋಟಿಸ್ ನೀಡಲಾಗಿದೆ.
ಮುಡಾ ಹಗರಣ ಸಂಬಂಧ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದ್ದು ನವರಾತ್ರಿ ನಂತರ ವಿಚಾರಣೆಗೆ ಬರುವುದಾಗಿ ತಿಳಿಸಿರೋ ಸಚಿವ ಸುರೇಶ್
ಮುಡಾದಲ್ಲಿ ನನ್ನ ಅವಧಿಯಲ್ಲಿ ಹಗರಣ ನಡೆದಿಲ್ಲ. ನನ್ನಿಂದ ಸಿಎಂಗೆ ಸಮಸ್ಯೆ ಅನ್ನೋದರಲ್ಲಿ ಅರ್ಥವಿಲ್ಲ ಎಂದು ಸಚಿವ ಬೈರತಿ ಸುರೇಶ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಹಗರಣ ನಡೆದ ಕಾಲಾವಧಿ ಯಾವುದು ನೋಡಿಕೊಳ್ಳಿ. ನನ್ನನ್ನೇಕೆ ಎಳೆಯುತ್ತೀರಾ ಎಂದು ಪ್ರಶ್ನಿಸಿಸಿದರು.