ಬೆಂಗಳೂರು:- ಸಿಎಂ ಪತ್ನಿಗೆ ಇಡಿ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತ ಎಂದು DCM ಡಿಕೆಶಿ ಹೇಳಿದ್ದಾರೆ.
ಸಿದ್ದರಾಮಯ್ಯಗೆ ಇಡಿ ನೋಟಿಸ್: ಇದು CMಗೆ ಟೆನ್ಷನ್ ಆದ್ರೆ ಡಿಕೆಶಿಗೆ ಖುಷ್ ಆಗಿದೆ- BY ವಿಜಯೇಂದ್ರ!
ಈ ಸಂಬಂಧ ಮಾತನಾಡಿದ ಅವರು, ಪಾರ್ವತಿ ಸಿದ್ದರಾಮಯ್ಯ ಅವರಿಗೆ ಇಡಿ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತ. ಸಿಎಂ ಪತ್ನಿ, ಬೈರತಿ ಸುರೇಶ್ಗೆ ನೋಟಿಸ್ ವಿಚಾರವಾಗಿ ಇದೆಲ್ಲಾ ರಾಜಕೀಯ ಪ್ರೇರಿತ. ನನ್ನ ಕೇಸ್ನಲ್ಲಿಯೂ ಇದೇ ರೀತಿ ಆಗಿತ್ತು. ಎರಡು ಘಟನೆಗಳು ಒಂದೇ ಸಲ ನಡೆಯಲ್ಲ. ಈಗಾಗಲೇ ಲೋಕಾಯುಕ್ತದಲ್ಲಿ ತನಿಖೆ ನಡೀತಿದೆ.
ಈ ವೇಳೆ ಬೇರೆ ಸಂಸ್ಥೆಯವರು ತನಿಖೆ ಮಾಡೋದಕ್ಕೆ ಆಗಲ್ಲ ಎಂದು ಅನೇಕ ತೀರ್ಪಿನಲ್ಲಿದೆ. ಅದೇನು ಎಂದು ಮಾಹಿತಿ ತಿಳಿದುಕೊಂಡು ಮಾತನಾಡುತ್ತೇನೆ. ನನ್ನ ಕೇಸ್ನಲ್ಲಿ ಸಿಬಿಐ ಮತ್ತು ಇಡಿಯವರು ತನಿಖೆ ಮಾಡುತ್ತಿದ್ದರು. ಈ ರೀತಿ ಮಾಡೋದಕ್ಕೆ ಬರಲ್ಲ ಎಂದು ಕೆಲವು ಜಡ್ಜ್ಮೆಂಟ್ ಇದೆ. ನಮ್ಮ ಸ್ಟ್ಯಾಂಡ್ ಕ್ಲಿಯರ್ ಇದೆ. ಇದೆಲ್ಲ ರಾಜಕೀಯ ಪ್ರೇರಿತ ಎಂದರು.