ಗದಗ:- ಇಡಿ ಸೀಳು ನಾಯಿ, ಇದು ಬಿಜೆಪಿ ಕೈಗೊಂಬೆ ಎಂದು ಹೇಳುವ ಮೂಲಕ ಕೃಷ್ಣ ಬೈರೇಗೌಡ ವಾಗ್ದಾಳಿ ಮಾಡಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ರೆ ಮುಲಾಜಿಲ್ಲದೆ ಕ್ರಮ: ವಿಜಯೇಂದ್ರ ವಾರ್ನಿಂಗ್
ಈ ಸಂಬಂಧ ಮಾತನಾಡಿದ ಅವರು,ಇಡಿ ಸೀಳು ನಾಯಿ, ಇದು ಬಿಜೆಪಿ ಕೈಗೊಂಬೆ. ಇಡಿ ಎನ್ಸಫೋರ್ಸಮೆಂಟ್ ಡೈರೆಕ್ಟರೇಟ್ ಅಲ್ಲ. ಅದು ರಾಜಕೀಯ ವಿಚ್ಛೇಟಿಂಗ್ ಏಜೆನ್ಸಿ. ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡೋದು. ವಿಪಕ್ಷ ನಾಯಕರ ಬಲಿ ಹಾಕೋದೇ ಇಡಿ ಕೆಲಸ.
ದೇಶಗಳಲ್ಲಿ ಇಲ್ಲಿಯವರೆಗೆ ಯಾರ್ಯಾರ ಮೇಲೆ ಕೇಸ್ ಹಾಕಿದ್ದಾರೆ. ಬರೀ ರಾಜಕೀಯ ವಿರೋಧಿಗಳ ಮೇಲೆ ಮಾತ್ರ ಕೇಸ್ ಹಾಕಿದ್ದಾರೆ. ಶ್ರೀಮಂತರ ಮೇಲೆ, ಬ್ಲ್ಯಾಕ್ ಮನಿ ಕೇಸ್ ಹಾಕಿದ್ದಾರಾ?ಸ್ವಿಸ್ ಬ್ಯಾಂಕ್ ನಲ್ಲಿ ಹಣ ಇಟ್ಟವ್ರ ಮೇಲೆ ಕೇಸ್ ಹಾಕಿದ್ದಾರಾ!? ಅಂತ ಪ್ರಶ್ನೆ ಮಾಡಿದರು.
ಇಡಿ ಬಿಜೆಪಿ ಅಂಗಸಂಸ್ಥೆಯಾಗಿದೆ. ಈ ಅಂಗಸಂಸ್ಥೆ ಕೆಲಸ ರಾಜಕೀಯ ವಿರೋಧಿಗಳ ಬಲಿ ಹಾಕೋದು.. ಇಡೀ ದೇಶದಲ್ಲಿ ಅವ್ರು ಅದೇ ಮಾಡಿದ್ದಾರೆ ಅಂತ ಸಚಿವರು ಆಕ್ರೋಶ ಹೊರ ಹಾಕಿದ್ದಾರೆ.