ಬೆಂಗಳೂರು: ವಿಪಕ್ಷಗಳನ್ನ ರಾಜಕೀಯವಾಗಿ ನಿರ್ನಾಮ ಮಾಡೋಕೆ ಇ.ಡಿ ಇರೋದು ಎಂದು ಸಚಿವ ಕೃಷ್ಣಭೈರೇಗೌಡ ಆರೋಪ ಮಾಡಿದ್ದಾರೆ. ನಗರದಲ್ಲಿ ಮುಡಾ ಕೇಸ್ ನಲ್ಲಿ ಸಿಎಂ ಪತ್ನಿ ಮತ್ತು ಸಚಿವ ಭೈರತಿ ಸುರೇಶ್ಗೆ ಇಡಿ ನೊಟೀಸ್ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,
ಬಿಜೆಪಿಯವರಿಗೆ ಇ.ಡಿಯವರು ಎಷ್ಟು ನೊಟೀಸ್ ಕೊಟ್ಡಿದ್ದಾರೆ ಹೇಳಿ? ಕರ್ನಾಟಕದಲ್ಲಿ ಬಿಜೆಪಿಯ ಅನೇಕ ಜನರ ಮೇಲೆ ಇಡಿ, ಸಿಬಿಐ ಕೇಸ್ ಇದೆ. ಅವರಿಗೆ ಎಲ್ಲಿ ನೊಟೀಸ್ ಕೊಟ್ಟಿದ್ದಾರೆ. ಅದಾನಿ ವಿರುದ್ಧ ಅಮೆರಿಕದಲ್ಲಿ FIR ಆಗಿದೆ. ಅವರಿಗೆ ಒಂದು ನೊಟೀಸ್ ಹೋಗಿಲ್ಲ.
Periods: ಮಹಿಳೆಯರೇ ಗಮನಿಸಿ.. ಮುಟ್ಟಿನ ಸಮಯದಲ್ಲಿ ಮೊಸರು ತಿನ್ನಬಹುದೇ..? ಇಲ್ಲಿದೆ ಮಾಹಿತಿ
ಸ್ವೀಸ್ ಬ್ಯಾಂಕ್ನಿಂದ ಹಣ ತರುತ್ತೇನೆ ಅಂದ್ರು ಬಂತಾ? ಕಪ್ಪು ಹಣ ಎಷ್ಟು ತಂದ್ರು? ಇಡಿ ತನಿಖೆ ಅನ್ನೋದು ಪೊಲಿಟಿಕಲ್ ಜಾರಿ ನಿರ್ದೇಶನಾಲಯ. ವಿಪಕ್ಷಗಳನ್ನ ರಾಜಕೀಯವಾಗಿ ನಿರ್ನಾಮ ಮಾಡೋಕೆ ಇ.ಡಿ ಇರೋದು. ಇಡಿ ಪೊಲಿಟಿಕಲ್ ಏಜೆನ್ಸಿ ಆಗಿದೆ. ಇ.ಡಿ ವಿರುದ್ಧ ನಾವು ಫೈಟ್ ಮಾಡ್ತೀವಿ. ರಾಜಕೀಯವಾಗಿಯೂ, ಕಾನೂನುನಾತ್ಮಕವಾಗಿಯೂ ಹೋರಾಟ ಮಾಡ್ತೀವಿ ಎಂದು ಹೇಳಿದ್ದಾರೆ.