ಬೆಂಗಳೂರು: ಸಿಎಂ ರಾಜೀನಾಮೆಗೆ ವಿಪಕ್ಷಗಳ ಒತ್ತಾಯ ಹಿನ್ನೆಲೆ ಹಾಗೂ ಮುಡಾ ಕೇಸ್ ನಲ್ಲಿ ಇಡಿ ಎಂಟ್ರಿ ಬೆನ್ನಲ್ಲೇ ಹಿಂದುಳಿದ ವರ್ಗಗಳ ನಾಯಕರ ಅಲರ್ಟ್ ಆಗಿದ್ದು ಖಾಸಗಿ ಹೋಟೆಲ್ ನಲ್ಲಿ ಮಹತ್ವದ ಮೀಟಿಂಗ್ ನಡೆಸಲಾಗಿದೆ.
ಹೌದು .. ಸಿದ್ದರಾಮಯ್ಯ ಪರ ಹೋರಾಟಕ್ಕೆ ಆಪ್ತ ನಾಯಕರು ಪ್ಲ್ಯಾನ್ ಮಾಡಿದ್ದು ಖಾ ಗಿ ಹೋಟೆಲ್ ನಲ್ಲಿ ಹಿಂದುಳಿದ ವರ್ಗಗಳ ನಾಯಕರ ಸಭೆ ನಡೆದಿದ್ದು ಸಚಿವ ಭೈರತಿ ಸುರೇಶ್, ಸಂತೋಷ್ ಲಾಡ್ ಸೇರಿ ಹಲವರು ಭಾಗಿಯಾಗಿದ್ದಾರೆ.
ಚಿವರ ಜೊತೆ ಹಲವು ಶಾಸಕರು ಖಾಸಗಿ ಹೋಟೆಲ್ ನಲ್ಲಿ ಸಭೆಯಲ್ಲಿ ಭಾಗಿಯಾಗಿದ್ದು ಮುಡಾ ಕೇಸ್ ನಲ್ಲಿ ಸಿಎಂ ವಿರುದ್ದ ಇಡಿ ಇಸಿಐಆರ್ ದಾಖಲು..ಕೇಂದ್ರ ಹಾಗೂ ವಿಪಕ್ಷಗಳ ವಿರುದ್ದ ಹೋರಾಟಕ್ಕೆ ರಣತಂತ್ರ
ಈ ಮಧ್ಯೆ ಸಿಎಂ ಸ್ಥಾನದ ಆಕಾಂಕ್ಷಿಗಳಿಂದ ರಹಸ್ಯ ಸಭೆ ಡಿಕೆಶಿ, ದಲಿತ ನಾಯಕರ ರಹಸ್ಯ ಸಭೆಗಳಿಂದ ಎಚ್ಚೆತ್ತ ಸಿದ್ದು ಪಡೆ ಹಿಂದುಳಿದ ವರ್ಗಗಳ ನಾಯಕರಿಂದ ಮಹತ್ವದ ಮೀಟಿಂಗ್