ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವಲ್ಲಿ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಅದು ಚಹಾ, ಕಾಫಿ, ಮಿಲ್ಕ್ಶೇಕ್ ಅಥವಾ ಯಾವುದೇ ಪಾನೀಯವಾಗಿರಲಿ, ನಾವು ಪ್ರತಿದಿನ ಕೆಲವು ಚಮಚ ಸಕ್ಕರೆಯನ್ನು ಬೆರೆಸಲು ಇಷ್ಟಪಡುತ್ತೇವೆ. ಈ ಪಾನೀಯಗಳು ನಮ್ಮ ದಿನವನ್ನು ತಂಪಾಗಿಸಲು ಅಥವಾ ಪ್ರಾರಂಭಿಸಲು ನಮಗೆ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತವೆ ಎಂಬುದು ನಮ್ಮ ನಂಬಿಕೆ. ಇದರ ಜೊತೆಗೆ ಈ ಕೆಳಗೆ ತಿಳಿಸಿರುವ ಕೆಲವೊಂದು ಆಹಾರ ಪದಾರ್ಥಗಳನ್ನು ಸಹ ಸೇವನೆ ಮಾಡುವುದರಿಂದ ಅತ್ಯುತ್ತಮ ಆರೋಗ್ಯ ವ್ಯವಸ್ಥೆಯನ್ನು ಜೊತೆಗೆ ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಬಹುದು.
ಸಿಟ್ರಸ್ ಹಣ್ಣುಗಳು
- ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿ ಕಂಡುಬರುತ್ತದೆ. ಸಿಟ್ರಸ್ ಹಣ್ಣುಗಳಿಗೆ ಉದಾಹರಣೆಯೆಂದರೆ ಕಿತ್ತಳೆ ಹಣ್ಣು, ಮೋಸಂಬಿ ಹಣ್ಣು, ನಿಂಬೆಹಣ್ಣು, ದ್ರಾಕ್ಷಿ ಹಣ್ಣು ಇತ್ಯಾದಿಗಳು.
- ಹುಳಿ ಮತ್ತು ಸಿಹಿ ಮಿಶ್ರಣದ ಈ ಹಣ್ಣುಗಳು ನಮ್ಮ ದೇಹದಲ್ಲಿ ಸೋಂಕುಗಳ ವಿರುದ್ಧ ಹೋರಾಡುವ ಗುಣವನ್ನು ಪಡೆದುಕೊಂಡಿರುತ್ತದೆ. ನಮಗೆ ಕೆಮ್ಮು, ಕಫ, ಶೀತ, ನೆಗಡಿ ಆದಂತಹ ಸಂದರ್ಭದಲ್ಲಿ ಅಥವಾ ಮಳೆಗಾಲ ಜೊತೆಗೆ ಚಳಿಗಾಲದ ಸಮಯದಲ್ಲಿ ನಮ್ಮ ದೇಹದ ತಾಪಮಾನವನ್ನು ಹೆಚ್ಚು ಮಾಡಿ ಸೋಂಕುಗಳಿಗೆ ದೇಹದಲ್ಲಿ ಜಾಗ ಇಲ್ಲದಂತೆ ಮಾಡುತ್ತದೆ.
- ಇದರ ಜೊತೆಗೆ ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಹೆಚ್ಚಾಗುವಂತೆ ಮಾಡಿ ಜೊತೆಗೆ ಬಿಳಿರಕ್ತಕಣಗಳ ಸಂಖ್ಯೆಯನ್ನು ಅಭಿವೃದ್ಧಿಪಡಿಸಿ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಈಗಿನ ಕೊರೋನ ಸಮಯದಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಯಾವುದೇ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ತುಂಬಾ ಅವಶ್ಯಕ.
ಕೆಂಪು ದಪ್ಪ ಮೆಣಸಿನಕಾಯಿ
- ಒಂದು ಹಣ್ಣಾದ ದಪ್ಪಮೆಣಸಿನಕಾಯಿಯಲ್ಲಿ ಯಥೇಚ್ಛ ಪ್ರಮಾಣದ ವಿಟಮಿನ್ ಸಿ ಅಂಶ ಸಿಗುತ್ತದೆ ಎಂದು ಹೇಳುತ್ತಾರೆ.
- ಆರೋಗ್ಯದ ವಿಷಯದಲ್ಲಿ ನಡೆದ ಒಂದು ಸಂಶೋಧನೆ ಹೇಳುವ ಹಾಗೆ ಕಿತ್ತಳೆ ಹಣ್ಣು ಮತ್ತು ನಿಂಬೆಹಣ್ಣು ಗಳಿಗೆ ಹೋಲಿಸಿದರೆ ದಪ್ಪಮೆಣಸಿನಕಾಯಿಯಲ್ಲಿ ಸುಮಾರು ಮೂರು ಪಟ್ಟು ಅಧಿಕ ವಿಟಮಿನ್ ಸಿ ಅಂಶದ ಪ್ರಮಾಣ ಸಿಗುತ್ತದೆ.
- ಬೀಟಾ-ಕ್ಯಾರೋಟಿನ್ ಅಂಶ ಕೂಡ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಇದರಿಂದ ಕಣ್ಣುಗಳು ಮತ್ತು ನಮ್ಮ ತ್ವಚೆ ಆರೋಗ್ಯಕರವಾಗಿ ರಕ್ಷಣೆಯಾಗುತ್ತದೆ.
ಬ್ರೊಕೋಲಿ
- ಹೂಕೋಸು, ಎಲೆಕೋಸು ಜಾತಿಗೆ ಸೇರಿದ ಬ್ರೊಕೋಲಿ ರೋಗನಿರೋಧಕ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಪ್ರಮುಖವಾಗಿ ಕೆಲಸ ಮಾಡಲಿದೆ. ಮುಖ್ಯವಾಗಿ ಇದರಲ್ಲಿ ವಿಟಮಿನ್ ಎ ಅಂಶ, ವಿಟಮಿನ್ ಸಿ, ವಿಟಮಿನ್ ಇ ಮತ್ತು ಅನೇಕ ಬಗೆಯ ದೇಹಕ್ಕೆ ಉಪಯುಕ್ತವಾದ ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ.
- ಆಂಟಿಆಕ್ಸಿಡೆಂಟ್ ಅಂಶಗಳ ಪ್ರಭಾವದಿಂದ ದೇಹದಲ್ಲಿ ಕಂಡುಬರುವ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುವ ಮೂಲಕ ಕ್ಯಾನ್ಸರ್ ಸಮಸ್ಯೆಯನ್ನು ಹೆಚ್ಚಾಗದಂತೆ ಅಥವಾ ಕಂಡು ಬರದಂತೆ ನೋಡಿಕೊಳ್ಳುತ್ತದೆ.
- ನಿಮ್ಮ ಮನೆಯಲ್ಲಿ ಒಂದು ವೇಳೆ ಬೆಣ್ಣೆ ಇದ್ದರೆ ಅದರ ಜೊತೆ ಬ್ರೊಕೋಲಿ ಸೇರಿಸಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ, ಅದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೆ ನಾಲಿಗೆ ರುಚಿ ಕೂಡ ದುಪ್ಪಟ್ಟು ಪ್ರಮಾಣದಲ್ಲಿ ಏರಿಕೆಯಾಗುತ್ತದೆ.
ಗಮನಿಸಬೇಕಾದ ಅಂಶ
ಆರೋಗ್ಯದ ವಿಚಾರ ಬಂದಾಗ ಎಂದಿಗೂ ಸಹ ನಿರ್ಲಕ್ಷತೆ ಒಳ್ಳೆಯದಲ್ಲ. ಸಣ್ಣಪುಟ್ಟ ಸೋಂಕುಗಳಿಂದ ಆರೋಗ್ಯ ಹದಗೆಡಬಾರದು ಎಂದರೆ ಆರೋಗ್ಯಕರವಾದ ಆಹಾರ ಪದ್ಧತಿಯನ್ನು ಜೊತೆಗೆ ಉತ್ತಮ ಜೀವನಶೈಲಿಯನ್ನು ಅಭ್ಯಾಸ ಮಾಡಿಕೊಂಡು ಕಾಯಿಲೆಗಳಿಂದ ದೂರ ಉಳಿಯಬೇಕು.