ಕೆಲವರಿಗೆ ಹಸಿ ಈರುಳ್ಳಿ ತಿನ್ನೋ ಅಭ್ಯಾಸ ಇರುತ್ತದೆ. ಆದರೆ ಹಸಿ ಈರುಳ್ಳಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಹಲವಾರು ಸಮಸ್ಯೆಗಳು ಕಾಡುತ್ತದೆಯಂತೆ.
ಇದು ಕೆಲವು ಜೀರ್ಣಕಾರಿ ಸಮಸ್ಯೆಯನ್ನು ಉಂಟುಮಾಡುತ್ತದೆಯಂತೆ. ಇದರಿಂದ ಗ್ಯಾಸ್, ಹೊಟ್ಟೆಯುಬ್ಬರ ಸಮಸ್ಯೆ ಕಾಡುತ್ತದೆಯಂತೆ.
ಹಸಿ ಈರುಳ್ಳಿ ತಿನ್ನುವುದರಿಂದ ಅಲರ್ಜಿ ಸಮಸ್ಯೆ ಕಾಡಬಹುದು. ಇದರಿಂದ ಚರ್ಮದಲ್ಲಿ ತುರಿಕೆ ಮತ್ತು ಉಸಿರಾಟದ ಸಮಸ್ಯೆಗಳು ಕಾಡುತ್ತದೆಯಂತೆ.
ಹಸಿ ಈರುಳ್ಳಿ ತಿನ್ನುವುದರಿಂದ ಎದೆಯುರಿ ಸಮಸ್ಯೆ ಕಾಡುತ್ತದೆ. ಹಾಗಾಗಿ ಈಗಾಗಲೇ ಎದೆಯುರಿ ಸಮಸ್ಯೆಯಿಂದ ಬಳಲುತ್ತಿರುವವರು ಹಸಿ ಈರುಳ್ಳಿ ತಿನ್ನಬೇಡಿ.
ಹಸಿ ಈರುಳ್ಳಿಯಲ್ಲಿ ಟೈರಮೈನ್ ಇದ್ದು, ಇದು ತಲೆನೋವನ್ನು ಉಂಟುಮಾಡುತ್ತದೆ. ಹಾಗಾಗಿ ಮೈಗ್ರೇನ್ ಸಮಸ್ಯೆ ಇರುವವರು ಇದನ್ನು ತಿನ್ನಬೇಡಿ.