ಜೇನುತುಪ್ಪವೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಮನೆಮದ್ದಿನಿಂದ ಹಿಡಿದು ಕಾಫಿ, ಚಹಾ, ತಿಂಡಿಯವರೆಗೂ ಇದು ಬಳಕೆಯಲ್ಲಿದೆ. ಆಂಟಿ ಆಕ್ಸಿಡೆಂಟ್, ಆಂಟಿ ಬ್ಯಾಕ್ಟೀರಿಯಲ್, ಆಂಟಿ ಇನ್ಫಾಮೇಟರಿ ಮತ್ತು ಆಂಟಿ ಫಂಗಲ್ ಗುಣಲಕ್ಷಣಗಳು ಕಂಡು ಬರುವುದರಿಂದ, ಮನುಷ್ಯ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹಲವಾರು ಬಾರಿ ಸಾಬೀತಾಗಿದೆ.
ದೇಹದ ಬೊಜ್ಜು ಕರಗಿಸಲು…
ದೇಹದ ಬೊಜ್ಜು ಆವರಿಸಿಕೊಂಡು ಬಿಟ್ಟರೆ, ಅದನ್ನು ಕರಗಿಸು ವುದು ಅಷ್ಟು ಸುಲಭವಲ್ಲ. ಆದರೆ ಸರಿಯಾದ ಆಹಾರಪದ್ಧತಿ ಹಾಗೂ ವ್ಯಾಯಾಮಗಳನ್ನು ಅಭ್ಯಾಸ ಮಾಡಿಕೊಂಡರೆ, ಖಂಡಿತ ಬೊಜ್ಜನ್ನು ಕರಗಿಸಿಕೊಳ್ಳ ಬಹುದು. ಇನ್ನು ಹೊಟ್ಟೆಯ ಸುತ್ತಲಿನ, ಬೊಜ್ಜು ಕರಗಿಸಿಕೊಳ್ಳ ಬೇಕು ಎಂದರೆ, ಮೊದಲಿಗೆ ತಣ್ಣನೆಯ ನೀರಿಗೆ ಒಂದೆ ರಡು ಚಮಚ ಜೇನು ಹನಿ ಬೆರೆಸಿ ಪ್ರತಿನಿತ್ಯ ಕುಡಿಯುವ ಅಭ್ಯಾಸ ಮಾಡಿದರೆ, ಹೊಟ್ಟೆಯ ಸುತ್ತಲಿನ ಬೊಜ್ಜು ಸುಲಭವಾಗಿ ಕರಗಿ ಹೋಗುತ್ತದೆ.
ಬಾಯಿಹುಣ್ಣು ಸಮಸ್ಯೆಗಳಿದ್ದರೆ…
ಬಾಯಿಹುಣ್ಣು ಆದ ಸಂದರ್ಭದಲ್ಲಿ, ಪ್ರತಿದಿನ ಒಂದೆರಡು ಟೇಬಲ್ ಚಮಚ ಆಗುವಷ್ಟು ಜೇನು ತುಪ್ಪವನ್ನು ಬಾಯಿಯಲ್ಲಿ ಹಾಕಿ ಇಟ್ಟುಕೊಂಡರೆ ಬಾಯಿಹುಣ್ಣು ಸಮಸ್ಯೆ ಬಹಳ ಬೇಗನೇ ನಿವಾರಣೆ ಯಾಗುತ್ತದೆ.ಇಲ್ಲಾಂದ್ರೆ, ಒಂದು ಟೀ ಚಮಚದಷ್ಟು ನೆಲ್ಲಿಕಾಯಿಯ ಪುಡಿಗೆ, ಇಷ್ಟೇ ಪ್ರಮಾಣದಲ್ಲಿ ಜೇನು ತುಪ್ಪ ದೊಂದಿಗೆ ಸೇರಿಸಿ, ದಪ್ಪಗೆ ಪೇಸ್ಟ್ ರೀತಿ ಮಾಡಿಕೊಂಡು, ಹುಣ್ಣು ಇರುವ ಜಾಗಕ್ಕೆ ಹಚ್ಚಿದರೆ ಬಾಯಿ ಹುಣ್ಣು ತಕ್ಷಣವೇ ವಾಸಿಯಾಗುತ್ತದೆ.
ಮೂಳೆಗಳ ಸಮಸ್ಯೆಗೆ
ಮಲಗುವ ಮುನ್ನ ಪ್ರತಿದಿನ ಹಾಲಿನ ಜೊತೆ ಜೇನುತುಪ್ಪವನ್ನು ಮಿಶ್ರಣಮಾಡಿ ಸೇವನೆ ಮಾಡುವು ದರಿಂದ ಮೂಳೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳಿಂದ ಪಾರಾಗಲು ಅನುಕೂಲವಾಗುತ್ತದೆ. ಉದಾಹರಣೆಗೆ ಹೇಳುವುದಾದರೆ, ಆಸ್ಟಿಯೋಪೋರೋಸಿಸ್, ಕೀಲುನೋವು ಇತ್ಯಾದಿ ಸಮಸ್ಯೆಗಳು ಬಹಳ ಬೇಗನೇ ನಿವಾರಣೆಯಾಗುತ್ತದೆ.
ಗಂಟಲು ನೋವು-ಒಣಕೆಮ್ಮಿನ ಸಮಸ್ಯೆ ಇದ್ದರೆ
ಒಂದು ಸಣ್ಣ-ತುಂಡು ಶುಂಠಿ ತೆಗೆದುಕೊಂಡು ಚೆನ್ನಾಗಿ ಜಜ್ಜಿ ಅದರಿಂದ ರಸ ತೆಗೆದುಕೊಳ್ಳಿ. ಇನ್ನು ಇದನ್ನು ಒಂದು ಟೇಬಲ್ ಚಮಚ ಜೇನುತುಪ್ಪದ ಜೊತೆಗೆ ಮಿಕ್ಸ್ ಮಾಡಿ ಸೇವಿಸಿ. ಪ್ರತಿದಿನ ಒಂದೆರ ಡು ಬಾರಿ ಹೀಗೆ ಮಾಡಿದರೆ, ಗಂಟಲು ನೋವು, ಒಣಕೆಮ್ಮಿನ ಸಮಸ್ಯೆ ದೂರವಾಗುತ್ತದೆ.