ಬೆಳ್ಳುಳ್ಳಿಯ ರಂಜಕ, ಸತು, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ. ಹಾಗಾಗಿ ಬೆಳ್ಳುಳ್ಳಿ ಅನೇಕ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ಅಂತ ಹೇಳಬಹುದು. ಅದರಲ್ಲೂ ಈ ಬೆಳ್ಳುಳ್ಳಿಯನ್ನು ರಾತ್ರಿ ಹೊತ್ತು ತಿಂದರೆ ಇನ್ನೂ ಒಳ್ಳೆಯದಂತೆ ಅಂತ ಹೇಳಲಾಗುತ್ತಿದೆ.
DC V/s MI: ಮತ್ತೆ ಹಾರ್ದಿಕ್ ಪಡೆಗೆ ಭಾರೀ ಮುಖಭಂಗ: ಮುಂಬೈ ವಿರುದ್ಧ ಡೆಲ್ಲಿಗೆ ರೋಚಕ ಗೆಲುವು!
ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ: ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಸಂಯುಕ್ತವಿರುವುದರಿಂದ ಆಂಟಿಮೈಕ್ರೋಬಿಯಲ್ ಗುಣವನ್ನು ಹೊಂದಿರುತ್ತದೆಯಂತೆ. ಇದು ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆಯಂತೆ. ಈ ಅಂಶ ದೇಹದಲ್ಲಿ ಆಗುವಂತಹ ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುವುದರೊಂದಿಗೆ ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಇದು ಬಲಪಡಿಸುತ್ತದೆ ಅಂತೆ.
ಬೆಳ್ಳುಳ್ಳಿ ಉತ್ಕರ್ಷಣ ನಿರೋಧಕವಾಗಿದೆ: ಬೆಳ್ಳುಳ್ಳಿಯು ಉತ್ಕರ್ಷಣ ನಿರೋಧಕವಾಗಿರುವುದರಿಂದ ದೇಹಕ್ಕೆ ತಗಲುವ ಕಾಯಿಲೆಗಳ ವಿರುದ್ಧ ಇದು ಸಮರ್ಥವಾಗಿ ಹೋರಾಡುತ್ತದೆ. ಇದು ಫ್ರೀರಾಡಿಕಲ್ಗಳಿಂದ ಉಂಟಾಗಬಹುದಾದ ಅನೇಕ ರೋಗಗಳನ್ನು ತಡೆಗಟ್ಟುತ್ತದೆ. ಆದ್ದರಿಂದ ಬೆಳ್ಳುಳ್ಳಿಯ ಎಸಳನ್ನು ಪ್ರತಿದಿನ ರಾತ್ರಿ ತಿನ್ನುವುದು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ.
ಬೆಳ್ಳುಳ್ಳಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಹಸಿ ಬೆಳ್ಳುಳ್ಳಿಯನ್ನು ಆಹಾರದಲ್ಲಿ ಸೇರಿಸುವುದರಿಂದ ಜೀರ್ಣಕಾರಿ ಸಂಬಂಧಿತ ಸಮಸ್ಯೆಗಳು ಸುಧಾರಿಸುತ್ತವೆ. ಇದು ಕರುಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಹಸಿ ಬೆಳ್ಳುಳ್ಳಿ ತಿನ್ನುವುದು ಕರುಳಿನ ಹುಳುಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಬೆಳ್ಳುಳ್ಳಿಯ ಇನ್ನೊಂದು ಒಳ್ಳೆಯ ವಿಷಯವೆಂದರೆ ಅದು ಕೆಟ್ಟ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ ಮತ್ತು ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಪೋಷಿಸುತ್ತದೆ
ಉರಿಯೂತದ ಪರಿಣಾಮ: ಬೆಳ್ಳುಳ್ಳಿಯು ಉರಿಯೂತ ಪರಿಣಾಮ ಇರುವಂತಹ ಸಂಯುಕ್ತಗಳನ್ನು ಹೊಂದಿರುತ್ತವೆ, ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಬೆಳ್ಳುಳ್ಳಿಯನ್ನು ದಿನರಾತ್ರಿ ತಿನ್ನುವುದು ದೇಹದಲ್ಲಿನ ಉರಿಯೂತ ಪರಿಣಾಮವನ್ನು ಆದಷ್ಟು ಮಟ್ಟಿಗೆ ಕಡಿಮೆ ಮಾಡುತ್ತದೆ ಅಂತ ಹೇಳಬಹುದು.
ದೇಹವನ್ನು ನಿರ್ವಿಶೀಕರಣಗೊಳಿಸುತ್ತದೆ: ಬೆಳ್ಳುಳ್ಳಿ ಎಸಳನ್ನು ತಿನ್ನುವುದರಿಂದ ಮತ್ತು ಹಸಿ ಬೆಳ್ಳುಳ್ಳಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ. ಬೆಳ್ಳುಳ್ಳಿ ಸೇವನೆ ದೇಹದಲ್ಲಿರುವ ವಿಷಯವನ್ನ ತೆಗೆದು ಹೊರಕ್ಕೆ ಹಾಕುತ್ತದೆಯಂತೆ. ಹೀಗೆ ದೇಹದಲ್ಲಿನ ವಿಷವನ್ನು ಹೊರಕ್ಕೆ ಹಾಗಿ ಒಳ್ಳೆಯ ಆರೋಗ್ಯವನ್ನು ಇದು ನೀಡಲು ಸಹಾಯ ಮಾಡುತ್ತದೆ.
ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ: ಕೆಲವರು ರಾತ್ರಿ ಹೊತ್ತು ಬೆಳ್ಳುಳ್ಳಿ ಎಸಳನ್ನು ತಿಂದು ಮಲಗುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ ಅಂತ ನಂಬುತ್ತಾರೆ. ಏಕೆಂದರೆ ಬೆಳ್ಳುಳ್ಳಿಯಲ್ಲಿ ಮೆದುಳಿಗೆ ವಿಶ್ರಾಂತಿ ಕೊಡುವ ಗುಣ ಇರುತ್ತದೆ. ಹಾಗಾಗಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಒಳ್ಳೆಯ ಗುಣಮಟ್ಟದ ನಿದ್ರೆ ಬರುತ್ತದೆ.
ಇದಷ್ಟೇ ಅಲ್ಲದೆ ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ನಿಮ್ಮಲ್ಲಿರುವ ದೀರ್ಘಕಾಲದ ಕೆಮ್ಮು ಮತ್ತು ಶೀತ ಸಹ ಕಡಿಮೆಯಾಗುತ್ತದೆ, ಶೀತ ಮತ್ತು ಕೆಮ್ಮಿನ ಸೋಂಕನ್ನು ನಿವಾರಿಸುವ ಸಾಮರ್ಥ್ಯವನ್ನು ಇದು ಹೊಂದಿದೆಯಂತೆ. ಅಷ್ಟೇ ಅಲ್ಲದೆ, ಬೆಳ್ಳುಳ್ಳಿ ತಿನ್ನುವುದರಿಂದ ಹೃದಯದ ಆರೋಗ್ಯ, ಮೆದುಳಿನ ಆರೋಗ್ಯ, ಚರ್ಮದ ಆರೋಗ್ಯವನ್ನು ಕಾಪಾಡುತ್ತದೆಯಂತೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆಯಂತೆ.