ಬೆಳಗ್ಗೆಯೇ ತಿಂಡಿ ಇಡೀ ದಿನ ನಿಮ್ಮ ಮೂಡ್ ಚೆನ್ನಾಗಿರುವಂತೆ ಮಾಡುತ್ತದೆ. ಸಾಮಾನ್ಯವಾಗಿ ಬೆಳಗ್ಗೆ ಚಿತ್ರಾನ್ನ ಮಾಡೋದು ಕಾಮನ್.
ಆದ್ರೆ ಈ ಚಿತ್ರಾನ್ನದಲ್ಲಿ (Chitranna Recipe) ಹೊಸ ರೆಸಿಪಿಯನ್ನು ಹೇಳುತ್ತಿದ್ದೇವೆ. ಕೆಲವೇ ಕೆಲವು ಪದಾರ್ಥ ಬಳಸಿ ಚಿತ್ರನ್ನ ಮಾಡೋದು ಹೇಗೆ ಅಂತ ಹೇಳುತ್ತಿದ್ದೇವೆ. ಇಂದು ನಾವು ನಿಮಗೆ ರುಚಿಯಾದ ಬೆಳ್ಳುಳ್ಳಿ ಚಿತ್ರನ್ನ ಮಾಡೋದು ಹೇಗೆ ಅಂತ ಹೇಳುತ್ತಿದ್ದೇವೆ.
Sugar Cane Juice: ರಸ್ತೆ ಬದಿ ಕಬ್ಬಿನ ಹಾಲು ಕುಡಿಯುವ ಮುನ್ನ ನಿಮಗಿದು ಗೊತ್ತೇ: ಏನಾಗಲಿದೆ ಎಂದು!
ಬೇಕಾಗುವ ಸಾಮಾಗ್ರಿಗಳು
ಅನ್ನ: ಒಂದು ಬೌಲ್
ಬೆಳ್ಳುಳ್ಳಿ ಎಸಳು: ಎಂಟರಿಂದ ಹತ್ತು
ಹುಣಸೆಹಣ್ಣಿನ ರಸ: ಎರಡು ಟೀ ಸ್ಪೂನ್
ಕಡಲೆಬೀಜ (ಶೇಂಗಾ): ಎರಡು ಟೀ ಸ್ಪೂನ್
ಉದ್ದಿನಬೇಳೆ: ಒಂದು ಟೀ ಸ್ಪೂನ್
ಕಡಲೆಬೇಳೆ: ಒಂದು ಟೀ ಸ್ಪೂನ್
ಕರಿಬೇವು: ಆರರಿಂದ ಏಳು ಎಲೆ
ಇಂಗು: ಚಿಟಿಕೆ
ಅರಿಶಿನ: ಚಿಟಿಕೆ
ಎಣ್ಣೆ: ಮೂರು ಟೀ ಸ್ಪೂನ್
ಜೀರಿಗೆ: ಒಂದು ಟೀ ಸ್ಪೂನ್
ಕಾಳು ಮೆಣಸು: ಎಂಟರಿಂದ ಹತ್ತು ಕಾಳು
ಉಪ್ಪು: ರುಚಿಗೆ ತಕ್ಕಷ್ಟು
ಬೆಳ್ಳುಳ್ಳಿ ಚಿತ್ರಾನ್ನ ಮಾಡೋ ವಿಧಾನ
ಮೊದಲಿಗೆ ಒಂದು ಬೌಲ್ನಷ್ಟು ಅನ್ನ ಸಿದ್ಧ ಮಾಡಿಕೊಂಡು ತಣ್ಣಗಾಗಲು ಬಿಡಿ.
ಈಗ ಜೀರಿಗೆ ಮತ್ತು ಕಾಳುಮೆಣಸನ್ನು ಕಾವಲಿಗೆ ಹಾಕಿಕೊಂಡು ಎರಡು ನಿಮಿಷ ಫ್ರೈ ಮಾಡಿಕೊಂಡು ಸಣ್ಣದಾಗಿ ರುಬ್ಬಿಕೊಳ್ಳಿ. ನಂತರ ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಎತ್ತಿಟ್ಟುಕೊಳ್ಳಿ.
ಈಗ ಒಲೆ ಆನ್ ಮಾಡ್ಕೊಂಡು ಅಗಲವಾದ ಪಾತ್ರೆ ಇರಿಸಿಕೊಳ್ಳಿ. ಪಾತ್ರೆಗೆ ಎಣ್ಣೆ ಹಾಕಿಕೊಂಡು ಬಿಸಿಯಾದ ನಂತರ ಸಾಸವೆ ಸೇರಿಸಿಕೊಳ್ಳಿ. ಸಾಸವೆ ಸಿಡಿಯಲು ಆರಂಭಿಸುತ್ತಿದ್ದಂತೆ ಕಡಲೆಬೇಳೆ, ಕಡಲೆಬೀಜ, ಉದ್ದಿನ ಬೇಳೆ ಸೇರಿಸಿ ಕಂದು ಬಣ್ಣಕ್ಕೆ ಬರೋವರೆಗೂ ಫ್ರೈ ಮಾಡಿಕೊಳ್ಳಿ.
ಈಗ ರುಬ್ಬಿಕೊಂಡಿರುವ ಜೀರಿಗೆ ಮತ್ತು ಕಾಳು ಮೆಣಸಿನ ಪೌಡರ್ ಸೇರಿಸಿ ಕಲಿಸಿಕೊಳ್ಳಬೇಕು. ತದನಂತರ ಜಜ್ಜಿದ ಬೆಳ್ಳುಳ್ಳಿ ಮತ್ತು ಕರೀಬೇವು ಸೇರಿಸಿ ಎರಡು ನಿಮಿಷ ಫ್ರೈ ಮಾಡಿಕೊಳ್ಳಿ. ಇದಾದ ಬಳಿಕ ಇಂಗು, ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಕೊನೆಯದಾಗಿ ಹುಣಸೆ ಹಣ್ಣಿನ ರಸ ಸೇರಿಸಿ ಮಸಾಲೆಯನ್ನು ಎರಡು ನಿಮಿಷ ಬೇಯಿಸಿಕೊಳ್ಳಬೇಕು. ಕೊನೆಯದಾಗಿ ಅನ್ನ ಸೇರಿಸಿಕೊಂಡು ಮಿಕ್ಸ್ ಮಾಡಿ, ಕೋತಂಬರಿ ಸೊಪ್ಪು ಸೇರಿಸಿದ್ರೆ ರುಚಿಯಾದ ಬೆಳ್ಳುಳ್ಳಿ ಚಿತ್ರನ್ನಾ ಸವಿಯಲು ಸಿದ್ಧ.